Friday, May 29, 2020

ತಾಯಿಯೂ ನೀನೆ, ಕಂದಮ್ಮನೂ ನೀನೆ / You are the mother, you are the child

ತಾಯಿಯೂ ನೀನೆ, ಕಂದಮ್ಮನೂ ನೀನೆ

 

ತಾಯಿಯೂ ನೀನೆ ಕಂದಮ್ಮನೂ ನೀನೆ

ತೊಟ್ಟಿಲಲಿ ನಗುವ ಮುದ್ದು ಮಗುವೂ ನೀನೆ

ತಂಗಿಯೂ ನೀನೆ ಹಿರಿಯಕ್ಕನೂ ನೀನೆ

ಕೈಮುಗಿದು ನಮಿಸುವ ಜಗನ್ಮಾತೆಯೂ ನೀನೆ

ಮಡಿಲ ಮೇಲೇರಿ ಆಡುವ ಕೂಸೂ ನೀನೆ

ಲೋಕವ ಕಿರುಬೆರಳ ಮೇಲಾಡಿಸುವವಳೂ ನೀನೆ

ಗಿರಗಿಟಲೆಯ ತಿರುಗಿಸಿ ಕಿಲಕಿಲ ನಗುವವಳೂ ನೀನೆ

ಗರಿಕೆ ಹಿಡಿದು ರಾವಣನ ಹೆಡೆಮುರಿದವಳೂ ನೀನೆ

ಶಿವಧನುಸನು ಎಡಗೈಲೆತ್ತಿದವಳೂ ನೀನೆ

ಕೋದಂಡಪಾಣಿ ಧನುಸು ಮುರಿಯಬಿಟ್ಟವಳೂ ನೀನೆ

ಕಾಂಚನ ಮೃಗಕೆ ಮೋಹಹೋದವಳೂ ನೀನೆ

ಮೋಹದಿಳಿಯ ಜಗಕರ್ಥೈಸಿದವಳೂ ನೀನೆ

ಮಿಥಿಲೆಯಲಿ ಜೊತೆ ನಡೆದವಳೂ ನೀನೆ

ಘೋರಾರಣ್ಯದಿ ಹಿಂದೆ ನಡೆದವಳೂ ನೀನೆ

ಲಂಕೆಗೆ ಮುನ್ನಡೆದವಳೂ ನೀನೆ

ಸಹಧರ್ಮಿಣಿ ನೀನೆ ಬೆಂಗಾವಲು ನೀನೆ ರಕ್ಷೆಯೂ ನೀನೆ

ದೇವಿಯೂ ನೀನೆ ದಿವ್ಯವೂ ನೀನೆ

ಬೆಳಕೂ ನೀನೆ ಬೆಳಗುವವಳೂ ನೀನೆ

ಸ್ತುತಿಯೂ ನೀನೆ ಸ್ತುತಿಪಾತ್ರಳೂ ನೀನೆ

ಪೂಜೆಯೂ ನೀನೆ ಭಕ್ತಿಯೂ ನೀನೆ

ರಾಮನೂ ನೀನೆ ರಾಮಾಯಣವೂ ನೀನೆ

ಜೀವಿಗಳ ಕಥೆ ಬರೆಯುವವಳೂ ನೀನೆ

ರಾಮಾಯಣದಿ ರಾಮನ ಸಲಹಿದವಳು ನೀನೆ

ಇಹಸಾಗರದ ಉಸುಬಿನಿಂದೀ ರಾಮನ ರಕ್ಷಿಸುವವಳೂ ನೀನೆ.

 

------ರಾಮಾಂಜನೇಯ


You are the mother, you are the child

 

You are the mother, child too are you

The gurgling babe in the cradle, you are that too

You are the loving little sister, you are the strict elder

You are that progenitor of the universe, to whom I lift my hands in worship

You are the infant that plays in the lap

You are the one who twirls the worlds around your little finger

You are the one who spins the rattle with childish laughter

You are the one who broke Ravana’s pride with a blade of grass

You are the one who lifted Shiva’s bow with your left hand

You are the one who let Kodandapani (Rama) break the bow

You are the one who desired the golden deer

You are the one who explains to the world the slippery slope that desires are

You are the one who walked alongside in Mithila

You are the one who walked behind in the dense forest

You are the one who walked ahead to Lanka

You are the sahadharmini, you protect the vanguard, you take dangers head on

You are divine, divinity too you are

You are the light, you are the one who lights

You are the praise, praiseworthy too are you

You are worship, you are devotion too

You are Rama, you are Ramayana too

You write the story (fate) of beings

You took care of Rama in the Ramayana

You are the one who protects me, Rama, from the quagmire of this material world.

 

-------Ram Sharaph


Thursday, May 28, 2020

ಶ್ರೀಸೀತಾದೇವಿ ಸ್ತುತಿ ಸ್ತೋತ್ರ / Shree Seetadevi Stuti Stotra

ಶ್ರೀಸೀತಾದೇವಿ ಸ್ತುತಿ ಸ್ತೋತ್ರ 

 

ಮಿಥಿಲೆಯ ನಂದಿನಿ ಕೋಸಲ ರಂಜನಿ

ಸುರನರ ವಂದಿತ ರಕ್ಕಸ ಪೂಜಿತ

ವೀರ ವಿರೋಚಿತ ಧೂರ್ತ ಪ್ರತಾಡಿತ

ರಘುವರ ಸುರಮಣಿ ಶ್ರೀಲಲಿತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಭೂದೇವಿ ಜಾತ ಅಜಾತ ಸುಜಾತೆ

ಸನಾತನ ಮಾತೆ ಶಕ್ತಿಯುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಉರುಮಿಳೆ ಸುಭಗಿನಿ ಜನಕನ ಕಣ್ಮಣಿ

ಶಿವಧನುಸನು ಕೈಲಾಡಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ರಂಜನಿ ರಂಜಿತೆ ಪೂಜಿತ ಪೂಜಿತೆ

ರಘುವರ ಸ್ತುತಿತೆ ಕಿಶೋರಲತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ರವಿಯನು ಹರಸುತ ಬೆಳಕನು ಚೆಲ್ಲುತ

ಮಲ್ಲಿಗೆ ಮೊಗ್ಗನು ಅರಳಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ದಿನವನು ನಡೆಸುತ ಭೂಮಿಯ ಹಿಡಿಯುತ

ಕಲರವ ಕಂಠವ ಹಾಡಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಅನ್ನವ ಬಸೆಯುತ ಹಾಲನು ಹರಿಸುತ

ತಿಂಗಳ ಬೆಳಕನು ಚಿಮುಕಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಹುಲ್ಲನು ಮುರಿಯುತ ವಜ್ರವ ಮಾಡುತ

ದರ್ಪವ ಮರ್ದಿಸಿ ಭಂಗಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಹನುಮನ ರಕ್ಷಿಸಿ ಅಸುರರ ಶಿಕ್ಷಿಸಿ

ಕಲ್ಲನು ನೀರಲಿ ತೇಲಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಅಗಿನಿಯ ದಹಿಸಿ ಮೋಹವ ನೀಗಿಸಿ

ಅವನವತಾರವ ರಕ್ಷಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಇಂದ್ರ ಕುಬೇರರು ವಾಯು ವರೂಣರು

ಅಶ್ವಿನಿ ಕುವರರು ಪೂಜಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಯಕ್ಕಸ ಕಿನ್ನರ ರಕ್ಕಸ ವಾನರ

ವಲಖಿಲಯಾ ವಸು ಕಿಂಪುರುಷ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ನಾಗ ಕಿರಾತ ಪಿಶಾಚ ರುದ್ರ

ದೇವ ಸುಪರ್ಣ ವಿದ್ಯಾಧರ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ದೈತ್ಯ ಮರೂತ ಅಸುರ ಆದಿತ್ಯ

ಗಂಧರ್ವ ದಾನವ ಕಾಲಕೇಯ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ಇಲ್ಲಿನ ಅಲ್ಲಿನ ಎಲ್ಲವ ತುಂಬಿದ ಜೀವಿಗಳು

ನಿವತಕವಚರೊಡಗೂಡಿ ಪೂಜಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಅಲಿನ ಭಜೇರಥ ಅನು ಆಯು ಭಲ್ಲಣ

ಭರತ ದೃಭೀಕ ಗುಂಗು ಕ್ರಿವಿ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ಭೃಗು ದ್ರುಹ್ಯು ಗಾಂಧಾರ ಕೀಕತ ಚೇದಿ

ಮತ್ಸ್ಯ ಮಲಂಖರ ಪಕ್ಥ ಪುರು

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ನಹುಷ ಪಾರಾವತ ಶೃಂಜ ರುಷಾಮ

ಪರಸು ಯದು ತುರವಾಸು ಕುರು

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ಪಾರಣಿ ತೃತ್ಸು ಸಾರಸವತ್ತ

ಇಕ್ಷ್ವಾಕು ನಿನ್ನನೆ ಪೂಜಿಸುತೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ಮೃತ್ ಗಗನಾಜಲ ಅಗ್ಗಿನಿ ವಾಯು

ಧಾತು ಅಧಾತು ಸರ್ವ ಶಿವೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ಭೂತ ಅಭೂತ ಜಾತ ಅಜಾತ

ನಶ್ವರ ಅಕ್ಷರ ಆತ್ಮ ಶಿವೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

ಆದಿ ಅನಂತ ಸದಾನಂದ ರೂಪ

ಬ್ರಹ್ಮ ಸ್ವರೂಪ ಅಚಿಂತ್ಯ ಶಿವೆ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

ದರುಶನ ವರವನು ಪಾದದಿ ಅರಸುವ ಪಾಮರನು

ನಿನ್ನಯ ಪಾದದಿ ಕೀರ್ತಿಯ ಹಾಡುವ ರಾಮನಿವ

ಜಯಜಯ ಜಾನಕಿ ಮೈಥಿಲಿ ಸೀತೆ ಸರ್ವಸ್ತುತೆ  | ಪ |

 

-------ರಾಮಾಂಜನೇಯ


ಈ ಮೇಲಿನ ಸ್ತೋತ್ರವನ್ನು ರೇವತಿ ರಾಗ (ಅಯಿ ಗಿರಿ ನಂದಿನಿ ಸ್ತೋತ್ರದ ಧಾಟಿಯಲ್ಲಿ) ಹಾಡಬಹುದು.


This is a stotra, or a song sung in praise of Seeta Devi, in raga Revati (the same raga that Ai Giri Nandini is sung in). Since it is difficult to translate it lyrically into English, maintaining the beat, the transliteration is given. I will attempt a translation in a future post.

Śrīsītādēvi stuti stōtra mithileya nandini kōsala ran̄jani suranara vandita rakkasa pūjita vīra virōcita dhūrta pratāḍita raghuvara suramaṇi śrīlalite jayajaya jānaki maithili sīte sarvastute | pa | bhūdēvi jāta ajāta sujāte sanātana māte śaktiyute jayajaya jānaki maithili sīte sarvastute | pa | urumiḷe subhagini janakana kaṇmaṇi śivadhanusanu kailāḍisute jayajaya jānaki maithili sīte sarvastute | pa | ran̄jani ran̄jite pūjita pūjite raghuvara stutite kiśōralate jayajaya jānaki maithili sīte sarvastute | pa | raviyanu harasuta beḷakanu celluta mallige mogganu araḷisute jayajaya jānaki maithili sīte sarvastute | pa | dinavanu naḍesuta bhūmiya hiḍiyuta kalarava kaṇṭhava hāḍisute jayajaya jānaki maithili sīte sarvastute | pa | annava baseyuta hālanu harisuta tiṅgaḷa beḷakanu cimukisute jayajaya jānaki maithili sīte sarvastute | pa | hullanu muriyuta vajrava māḍuta darpava mardisi bhaṅgisute jayajaya jānaki maithili sīte sarvastute | pa | hanumana rakṣisi asurara śikṣisi kallanu nīrali tēlisute jayajaya jānaki maithili sīte sarvastute | pa | aginiya dahisi mōhava nīgisi avanavatārava rakṣisute jayajaya jānaki maithili sīte sarvastute | pa | indra kubēraru vāyu varūṇaru aśvini kuvararu pūjisute jayajaya jānaki maithili sīte sarvastute | pa | yakkasa kinnara rakkasa vānara valakhilayā vasu kimpuruṣa jayajaya jānaki maithili sīte sarvastute | pa | nāga kirāta piśāca rudra dēva suparṇa vidyādhara jayajaya jānaki maithili sīte sarvastute | pa | daitya marūta asura āditya gandharva dānava kālakēya jayajaya jānaki maithili sīte sarvastute | pa | illina allina ellava tumbida jīvigaḷu nivatakavacaroḍagūḍi pūjisute jayajaya jānaki maithili sīte sarvastute | pa | alina bhajēratha anu āyu bhallaṇa bharata dr̥bhīka guṅgu krivi jayajaya jānaki maithili sīte sarvastute | pa | bhr̥gu druhyu gāndhāra kīkata cēdi matsya malaṅkhara paktha puru jayajaya jānaki maithili sīte sarvastute | pa | nahuṣa pārāvata śr̥n̄ja ruṣāma parasu yadu turavāsu kuru jayajaya jānaki maithili sīte sarvastute | pa | pāraṇi tr̥tsu sārasavatta ikṣvāku ninnane pūjisute jayajaya jānaki maithili sīte sarvastute | pa | mr̥t gaganājala aggini vāyu dhātu adhātu sarva śive jayajaya jānaki maithili sīte sarvastute | pa | bhūta abhūta jāta ajāta naśvara akṣara ātma śive jayajaya jānaki maithili sīte sarvastute | pa | ādi ananta sadānanda rūpa brahma svarūpa acintya śive jayajaya jānaki maithili sīte sarvastute | pa | daruśana varavanu pādadi arasuva pāmaranu ninnaya pādadi kīrtiya hāḍuva rāmaniva jayajaya jānaki maithili sīte sarvastute | pa |

---------Ramanjaneya


Tuesday, May 26, 2020

ಏಕಳುವೆಯೋ ರಾಮಯ್ಯ ಏಕಳುವೆಯೋ / Why do you cry little Rama, why do you cry

ನಿನ್ನೆಯ ಪದ್ಯದ ಉತ್ತರಭಾಗವಿದು...


ಏಕಳುವೆಯೋ ರಾಮಯ್ಯ ಏಕಳುವೆಯೋ

 

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

 

ಮುದ್ದಾದ ಮುಖ ಬೆಳಗಲು ರವಿ ಹೋಗಿರುವನಯ್ಯಾ

ಬಿಸಿಲಿಗೆ ನೆರಳ ಹಾಸಲು ಚಂದಮನು ಹೋಗಿರುವನಯ್ಯಾ

ಕಂಗಳಲಿ ಅವಳಿಯ ನೋಡಲು ತಾರೆಗಳು ಹೋಗಿರುವುವಯ್ಯಾ

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

  

ತೊದಲು ನುಡಿಗೆ ತಾಳ ಹಾಕಲು ಹಕ್ಕಿ ಹೋದವಯ್ಯಾ

ತಂಗಾಳಿ ಬೀಸಲೋಸುಗ ಚಿಟ್ಟೆಪಟ್ಟೆಗಳು ಹೋದವಯ್ಯಾ

ಮುಂಗುರುಳ ಸಿಂಗರಿಸಲೋಸುಗ ದುಂಬಿ ಹೋದವಯ್ಯಾ

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

 

ಜಳಕ ಮಾಡಿಸಲು ಹೂದಳಗಳ ಇಬ್ಬನಿ ಹೋದವಯ್ಯಾ

ಸಾಂಬ್ರಾಣಿ ಏಕೆಂದು ಕಂಪ ಚೆಲ್ಲಲು ಮೊಗ್ಗು ಹೋದವಯ್ಯಾ

ಗಲ್ಲವ ನೋಡಿ ನಾಚಲು ಹಣ್ಣಾದ ಹೂ ಹೋದವಯ್ಯಾ

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

 

ಉಕ್ಕಿ ನಲಿಯಲೆಂದು ನೊರೆಹಾಲು ಹೋಯಿತಯ್ಯಾ

ಪಾಲ್ಗಡಲಿಂದೆದ್ದವಳ ದರುಶನ ಮಾಡಲು ಬೆಣ್ಣೆ ಹೋಗದೇನಯ್ಯಾ

ಉದುರುವ ಜೊಲ್ಲ ಸವಿಗೊಳಿಸಲೆಂದು ಬೆಲ್ಲ ಹೋಯಿತಯ್ಯಾ

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

 

ಪುಟ್ಟ ಕೈಸೋಂಕ ಪ್ರಸಾದ ಪಡೆಯಲು ಆಟಿಕೆ ಹೋಯಿತಯ್ಯಾ

ಲಾಲಿ ಹಾಡಿ ಮಲಗಿಸಲು ಜೋಗುಳ ಹೋಯಿತಯ್ಯಾ

ಮುದ್ದ ನೋಡಿ ಮತ್ತೇರಿ ತೂಗೇ ತೂಗಿಹೋಯಿತಯ್ಯಾ

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

 

ಪುಟ್ಟ ತಾಯ ಬಲಗೈ ಕಾಣಲು ಶಿವಪ್ಪ ಹೋದನಯ್ಯಾ

ಪುರಂದರ ಕನಕಾದಿಗಳು ಮಂತ್ರ ಮುಗ್ಧರಾಗಿ ಹೋದರಯ್ಯಾ

ಕಸ್ತೂರಿ ಚಂದನಗಳು ಪೂಜೆಗೆ ಹೋದವಯ್ಯಾ

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

 

ಏಕಳುವೆಯೋ ರಾಮಯ್ಯ ಏಕಳುವೆಯೋ

ಮುದ್ದು ಸೀತಮ್ಮನಿರುವಾಗ ಬಿಟ್ಟು ಬರುವರೇನಯ್ಯಾ

ಆ ಮುದ್ದ ಕಂಡು ಮನಸೋಲದಿರುವವರಾರಯ್ಯಾ

ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|

 

--------------ರಾಮಾಂಜನೇಯ



This is a sequel to the poem published yesterday:

Why do you cry little Rama, why do you cry

 

Why do you cry little Rama, why do you cry |refrain|

 

To light up the pretty face has the sun gone my dear

To spread shade in the heat has the moon gone dear

To gaze at the beautiful pair of eyes the stars have gone

Why do you cry little Rama, why do you cry |r|

 

To sing chorus for the gurgling have the birds gone

To fan the heat away have the butterflies gone

To adorn pretty curls have the bees disappeared

Why do you cry little Rama, why do you cry |r|

 

To bathe her have the dewdrops on petals gone

To replace the stinging sambrani have the buds gone

To abash at the curve of the chin have the ripe fruits gone

Why do you cry little Rama, why do you cry |r|

 

Overflowing with joy has the frothing milk gone

To see her who has arisen form the milky ocean has the butter gone

To sweeten the dripping drool has the jaggery gone

Why do you cry little Rama, why do you cry |r|

 

To feel the touch of little hands have the toys gone

To finish singing the refrain has the lullaby gone

Intoxicated by the cuteness asway has the cradle gone

Why do you cry little Rama, why do you cry |r|

 

To see her tiny right hand has Lord Shiva gone

Tongue tied have the saints Purandara Kanaka become

For her pooja has the sandalwood paste gone

Why do you cry little Rama, why do you cry |r|

 

Why do you cry little Rama, why do you cry

With cute Seetamma around will they leave her ever

Can anyone not lose their heart to her prettiness

Why do you cry little Rama, why do you cry |r|

 

------------Ram Sharaph

Monday, May 25, 2020

ಅಳಬೇಡವೋ ರಾಮಯ್ಯ ಅಳಬೇಡವೋ / Don't Cry Little Rama, don't Cry

ಅಳಬೇಡವೋ ರಾಮಯ್ಯ ಅಳಬೇಡವೋ


ಅಳಬೇಡವೋ ರಾಮಯ್ಯ ಅಳಬೇಡವೋ |ಪ|


ಸಂಜೆಯಾಗದೆ ರವಿ ಹೋದನೆಂದಳಬೇಡವೋ

ಬೆಳಕಾಗದೆ ಚಂದಮ್ಮನು ಕಾಣಲಿಲ್ಲವೆಂದಳಬೇಡವೋ

ಇರುಳಾಗಿಯೂ ತಾರೆ ಮೂಡಲಿಲ್ಲವೆಂದಳಬೇಡವೋ

ಅಳಬೇಡವೋ ರಾಮಯ್ಯ ಅಳಬೇಡವೋ |ಪ|

 

ಹಕ್ಕಿಪಕ್ಕಿಗಳ ಕಲರವವಿಲ್ಲವೆಂದಳಬೇಡವೋ

ಚಿಟ್ಟೆಪಟ್ಟೆಗಳ ರೆಕ್ಕೆ ಪಟಪಟವಿಲ್ಲವೆಂದಳಬೇಡವೋ

ದುಂಬಿಗಳು ಪರಾಗ ಚೆಲ್ಲಲಿಲ್ಲವೆಂದಳಬೇಡವೋ

ಅಳಬೇಡವೋ ರಾಮಯ್ಯ ಅಳಬೇಡವೋ |ಪ|

 

ಹೂದಳಗಳ ಇಬ್ಬನಿ ಕಾಣಲಿಲ್ಲವೆಂದಳಬೇಡವೋ

ಮೊಗ್ಗುಗಳ ಸುಗಂಧವರಳಲಿಲ್ಲವೆಂದಳಬೇಡವೋ

ಹಣ್ಣಾದ ಹೂಗಳು ಅಮೃತ ಸುರಿಸಲಿಲ್ಲವೆಂದಳಬೇಡವೋ

ಅಳಬೇಡವೋ ರಾಮಯ್ಯ ಅಳಬೇಡವೋ |ಪ|

 

ಒಲೆಯ ಮೇಲ ಹಾಲುಕ್ಕಲಿಲ್ಲವೆಂದಳಬೇಡವೋ

ಕಡೆದ ಮಜ್ಜಿಗೆಯಲಿ ಬೆಣ್ಣೆಯೇಳಲಿಲ್ಲವೆಂದಳಬೇಡವೋ

ಕಾಯಿಸಿದ ಬೆಲ್ಲ ಪಾಕವಾಗಲಿಲ್ಲವೆಂದಳಬೇಡವೋ

ಅಳಬೇಡವೋ ರಾಮಯ್ಯ ಅಳಬೇಡವೋ |ಪ|

 

ಆಟಿಕೆಗಳು ಕಾಣಲಿಲ್ಲವೆಂದಳಬೇಡವೋ

ಮಲಗಿಸುವ ಜೋಗುಳ ಕೇಳಲಿಲ್ಲವೆಂದಳಬೇಡವೋ

ಉಯ್ಯಾಲೆ ತೂಗುತಿಲ್ಲವೆಂದಳಬೇಡವೋ

ಅಳಬೇಡವೋ ರಾಮಯ್ಯ ಅಳಬೇಡವೋ |ಪ|

 

ಶಿವಪ್ಪ ಇಂದ್ರಾದಿಗಳು ಹೂವೃಷ್ಟಿ ಸುರಿಸಲಿಲ್ಲವೆಂದಳಬೇಡವೋ

ಪುರಂದರ ಕನಕಾದಿಗಳು ನಾಮಕೀರ್ತನೆ ಹಾಡಲಿಲ್ಲವೆಂದಳಬೇಡವೋ

ಕಸ್ತೂರಿ ಚಂದನಗಳು ಬಿಟ್ಟುಹೋದವೆಂದಳಬೇಡವೋ

ಅಳಬೇಡವೋ ರಾಮಯ್ಯ ಅಳಬೇಡವೋ |ಪ|

 

ಅಳಬೇಡವೋ ರಾಮಯ್ಯ ಅಳಬೇಡವೋ

ಮುದ್ದು ಸೀತಮ್ಮನನು ನೋಡಲೆಲ್ಲರೂ ಹೋಗಿರುವರೋ

ಆ ನಗುವ ಕಂಡು ಸೋಲದಿರುವರಾರಿರುವರೋ

ಅಳಬೇಡವೋ ರಾಮಯ್ಯ ಅಳಬೇಡವೋ |ಪ|

 

--------------ರಾಮಾಂಜನೇಯ


Don’t Cry Little Rama, don’t Cry

 

Don’t cry little Rama, don’t cry |refrain|

 

Don’t cry that the sun left the skies before dusk

Don’t cry that the moon didn’t appear after dark

Don’t cry that the stars don’t shine though night

Don’t cry little Rama, don’t cry |r|

 

Don’t cry that the birdsong is not to be heard

Don’t cry that the butterflies are not flapping their wings

Don’t cry that the bees have not sprinkled pollen

Don’t cry little Rama, don’t cry |r|

 

Don’t cry that the dew is not on flower petals

Don’t cry that fragrance does not blossom from buds

Don’t cry that the ripened fruits don’t pour nectar

Don’t cry little Rama, don’t cry |r|

 

Don’t cry that the milk does not froth over

Don’t cry that butter does not churn out of curd

Don’t cry that the melted jaggery does not turn sweet

Don’t cry little Rama, don’t cry |r|

 

Don’t cry that the toys are not to be seen

Don’t cry that the sweet lullaby is not to be heard

Don’t cry that your cradle is not rocking

Don’t cry little Rama, don’t cry |r|

 

Don’t cry that the gods don’t shower petals

Don’t cry that the saints don’t sing your keertanas

Don’t cry that the sandal wood paste has gone away

Don’t cry little Rama, don’t cry |r|

 

Don’t cry little Rama, don’t cry

They have all gone to see little Seeta, pretty Seeta

Can anyone resist that captivating smile

Don’t cry little Rama, don’t cry |r|

 

--------Ram Sharaph


ಸೀತಮ್ಮ ಸಂಕೀರ್ತನ: ಪ್ರಸ್ತಾವನೆ / Seetamma Sankeertana: an Introduction

ಸೀತಮ್ಮನ ಕೃಪೆಯಿಂದ ಕಳೆದ ದಿನಗಳಲ್ಲಿ ಕೆಲವು ಸೀತಮನನ್ನು ಕುರಿತ ಪದ್ಯಗಳು ರಚಿತವಾದವು.  ಈ ಪದ್ಯಗಳ ಕರ್ತೃ ಸೀತಮ್ಮ - ಲೇಖನಿ ಹಿಡಿದ ಕೈ ಮಾತ ನನ್ನದು.  ಈ ಬ್ಲಾಗ್‍ನ ಸಾಧನದಿಂದ ದಿನಕ್ಕೊಂದು ಪದ್ಯವನ್ನು ಪ್ರಕಟಿಸಲು ಯತ್ನಿಸುತ್ತೇನೆ.  ಅವಶ್ಯವಿದ್ದೆಡೆ ಸಂಕ್ಷಿಪ್ತವಾದ ವಿವರಣೆ/ವ್ಯಾಖ್ಯೆಯನ್ನೂ ಕೊಟ್ಟಿರುತ್ತದೆ.  ಸೀತಮ್ಮನ ಮಹಿಮೆ ಹೆಚ್ಚು ಜನರನ್ನು ತಲುಪಲೆಂದು ಈ ಬ್ಲಾಗ್‍ಅನ್ನು ದ್ವಿಭಾಷೆಗಳಲ್ಲಿ ಪ್ರಕಟಿಸಲಾಗುತ್ತಿದೆ.  ಓದುಗರ ಅನಿಸಿಕೆಗಳನ್ನು ಕಮೆಂಟ್‍ನ ಮೂಲಕ ಕೋರಿದೆ.  ಪದ್ಯಗಳ ಎಲ್ಲ ಹಕ್ಕುಗಳೂ ಕಾದಿರಿಸಿವೆ.  ಓದುಗರು ಲಾಭಾಸಕ್ತಿಯಿಲ್ಲದ ಉದ್ದೇಶಕ್ಕಾಗಿ ಪದ್ಯಗಳನ್ನು ಬಳಸಬಹುದು - ರಾಗಕ್ಕೆ ಅಳವಡಿಸಿ ಹಾಡುವವರು ಅದರ ಧ್ವನಿಮುದ್ರಿಕೆ (recording) ಅನ್ನು mp3 ಮೂಲಕ ಈ ಲೇಖಕರಿಗೆ ಕಳಿಸುವುದಾಗಿ ವಿನಂತಿಸಿದೆ.  ಲಾಭಾಸಕ್ತಿಗಾಗಿ ಪದ್ಯಗಳನ್ನು ಉಪಯೋಗಿಸಲುದ್ದೇಶಿಸುವವರು (ಕಛೇರಿ ಇತ್ಯಾದಿ) ಲೇಖಕರನ್ನು ಸಂಪರ್ಕಿಸಬೇಕೆಂದು ನಿರ್ದೇಶಿಸಿದೆ.  ಸೀತಮ್ಮನ ಕೃಪೆ ನಮ್ಮೆಲ್ಲರ ಮೇಲಿರಲಿ.  ಸರ್ವಂ ಸೀತಾಕೃತಮಸ್ತು ಸರ್ವಂ ಸೀತಾರ್ಪಣಮಸ್ತು.

With the grace of Mother Seeta, some poems celebrating her glory were composed in the last few days.  The creator of these poems is Seetamma, I am only the hand holding thepen.  Through the medium of this blog, I will attempt to publish a poem a day.  Where necessary, a brief explanation will also be provided.  This blog is being published bilingually so that the glory of Seetamma may reach more people.  Readers' thoughts and reactions are sought through the comments section.  All rights to the poems are reserved.  Those intending to use the poems for non-commercial or personal purposes are free to do so - those who desire to sing the poems set to raga are requested to send the mp3 recording to my mail id.  Those intending to use these poems for a commercial purpose (concerts etc.,) are required to obtain permission from the author by writing to my mail id.  May Seetamma bless us all.  Sarvam Seetaakrutamastu Sarvam SeetaarpaNamastu.