ಶ್ರೀಸೀತಾದೇವಿ ಸ್ತುತಿ ಸ್ತೋತ್ರ
ಮಿಥಿಲೆಯ ನಂದಿನಿ
ಕೋಸಲ ರಂಜನಿ
ಸುರನರ ವಂದಿತ
ರಕ್ಕಸ ಪೂಜಿತ
ವೀರ ವಿರೋಚಿತ
ಧೂರ್ತ ಪ್ರತಾಡಿತ
ರಘುವರ ಸುರಮಣಿ
ಶ್ರೀಲಲಿತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಭೂದೇವಿ ಜಾತ
ಅಜಾತ ಸುಜಾತೆ
ಸನಾತನ ಮಾತೆ
ಶಕ್ತಿಯುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಉರುಮಿಳೆ ಸುಭಗಿನಿ ಜನಕನ ಕಣ್ಮಣಿ
ಶಿವಧನುಸನು ಕೈಲಾಡಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ರಂಜನಿ ರಂಜಿತೆ
ಪೂಜಿತ ಪೂಜಿತೆ
ರಘುವರ ಸ್ತುತಿತೆ
ಕಿಶೋರಲತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ರವಿಯನು ಹರಸುತ
ಬೆಳಕನು ಚೆಲ್ಲುತ
ಮಲ್ಲಿಗೆ
ಮೊಗ್ಗನು ಅರಳಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ದಿನವನು ನಡೆಸುತ
ಭೂಮಿಯ ಹಿಡಿಯುತ
ಕಲರವ ಕಂಠವ
ಹಾಡಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಅನ್ನವ ಬಸೆಯುತ
ಹಾಲನು ಹರಿಸುತ
ತಿಂಗಳ ಬೆಳಕನು
ಚಿಮುಕಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಹುಲ್ಲನು
ಮುರಿಯುತ ವಜ್ರವ ಮಾಡುತ
ದರ್ಪವ ಮರ್ದಿಸಿ
ಭಂಗಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಹನುಮನ ರಕ್ಷಿಸಿ
ಅಸುರರ ಶಿಕ್ಷಿಸಿ
ಕಲ್ಲನು ನೀರಲಿ
ತೇಲಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಅಗಿನಿಯ ದಹಿಸಿ
ಮೋಹವ ನೀಗಿಸಿ
ಅವನವತಾರವ
ರಕ್ಷಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಇಂದ್ರ ಕುಬೇರರು ವಾಯು ವರೂಣರು
ಅಶ್ವಿನಿ ಕುವರರು ಪೂಜಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಯಕ್ಕಸ ಕಿನ್ನರ ರಕ್ಕಸ ವಾನರ
ವಲಖಿಲಯಾ ವಸು ಕಿಂಪುರುಷ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ನಾಗ ಕಿರಾತ ಪಿಶಾಚ ರುದ್ರ
ದೇವ ಸುಪರ್ಣ ವಿದ್ಯಾಧರ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ದೈತ್ಯ ಮರೂತ ಅಸುರ ಆದಿತ್ಯ
ಗಂಧರ್ವ ದಾನವ ಕಾಲಕೇಯ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಇಲ್ಲಿನ ಅಲ್ಲಿನ ಎಲ್ಲವ ತುಂಬಿದ ಜೀವಿಗಳು
ನಿವತಕವಚರೊಡಗೂಡಿ ಪೂಜಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಅಲಿನ ಭಜೇರಥ ಅನು ಆಯು ಭಲ್ಲಣ
ಭರತ ದೃಭೀಕ ಗುಂಗು ಕ್ರಿವಿ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಭೃಗು ದ್ರುಹ್ಯು ಗಾಂಧಾರ ಕೀಕತ ಚೇದಿ
ಮತ್ಸ್ಯ ಮಲಂಖರ ಪಕ್ಥ ಪುರು
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ನಹುಷ ಪಾರಾವತ ಶೃಂಜ ರುಷಾಮ
ಪರಸು ಯದು ತುರವಾಸು ಕುರು
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಪಾರಣಿ ತೃತ್ಸು ಸಾರಸವತ್ತ
ಇಕ್ಷ್ವಾಕು ನಿನ್ನನೆ ಪೂಜಿಸುತೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಮೃತ್ ಗಗನಾಜಲ ಅಗ್ಗಿನಿ ವಾಯು
ಧಾತು ಅಧಾತು ಸರ್ವ ಶಿವೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಭೂತ ಅಭೂತ ಜಾತ ಅಜಾತ
ನಶ್ವರ ಅಕ್ಷರ ಆತ್ಮ ಶಿವೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ಆದಿ ಅನಂತ ಸದಾನಂದ ರೂಪ
ಬ್ರಹ್ಮ ಸ್ವರೂಪ ಅಚಿಂತ್ಯ ಶಿವೆ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
ದರುಶನ ವರವನು
ಪಾದದಿ ಅರಸುವ ಪಾಮರನು
ನಿನ್ನಯ ಪಾದದಿ
ಕೀರ್ತಿಯ ಹಾಡುವ ರಾಮನಿವ
ಜಯಜಯ ಜಾನಕಿ
ಮೈಥಿಲಿ ಸೀತೆ ಸರ್ವಸ್ತುತೆ | ಪ |
-------ರಾಮಾಂಜನೇಯ
ಈ ಮೇಲಿನ ಸ್ತೋತ್ರವನ್ನು ರೇವತಿ ರಾಗ (ಅಯಿ ಗಿರಿ ನಂದಿನಿ ಸ್ತೋತ್ರದ ಧಾಟಿಯಲ್ಲಿ) ಹಾಡಬಹುದು.
This is a stotra, or a song sung in praise of Seeta Devi, in raga Revati (the same raga that Ai Giri Nandini is sung in). Since it is difficult to translate it lyrically into English, maintaining the beat, the transliteration is given. I will attempt a translation in a future post.
Śrīsītādēvi stuti stōtra mithileya nandini kōsala ran̄jani suranara vandita rakkasa pūjita vīra virōcita dhūrta pratāḍita raghuvara suramaṇi śrīlalite jayajaya jānaki maithili sīte sarvastute | pa | bhūdēvi jāta ajāta sujāte sanātana māte śaktiyute jayajaya jānaki maithili sīte sarvastute | pa | urumiḷe subhagini janakana kaṇmaṇi śivadhanusanu kailāḍisute jayajaya jānaki maithili sīte sarvastute | pa | ran̄jani ran̄jite pūjita pūjite raghuvara stutite kiśōralate jayajaya jānaki maithili sīte sarvastute | pa | raviyanu harasuta beḷakanu celluta mallige mogganu araḷisute jayajaya jānaki maithili sīte sarvastute | pa | dinavanu naḍesuta bhūmiya hiḍiyuta kalarava kaṇṭhava hāḍisute jayajaya jānaki maithili sīte sarvastute | pa | annava baseyuta hālanu harisuta tiṅgaḷa beḷakanu cimukisute jayajaya jānaki maithili sīte sarvastute | pa | hullanu muriyuta vajrava māḍuta darpava mardisi bhaṅgisute jayajaya jānaki maithili sīte sarvastute | pa | hanumana rakṣisi asurara śikṣisi kallanu nīrali tēlisute jayajaya jānaki maithili sīte sarvastute | pa | aginiya dahisi mōhava nīgisi avanavatārava rakṣisute jayajaya jānaki maithili sīte sarvastute | pa | indra kubēraru vāyu varūṇaru aśvini kuvararu pūjisute jayajaya jānaki maithili sīte sarvastute | pa | yakkasa kinnara rakkasa vānara valakhilayā vasu kimpuruṣa jayajaya jānaki maithili sīte sarvastute | pa | nāga kirāta piśāca rudra dēva suparṇa vidyādhara jayajaya jānaki maithili sīte sarvastute | pa | daitya marūta asura āditya gandharva dānava kālakēya jayajaya jānaki maithili sīte sarvastute | pa | illina allina ellava tumbida jīvigaḷu nivatakavacaroḍagūḍi pūjisute jayajaya jānaki maithili sīte sarvastute | pa | alina bhajēratha anu āyu bhallaṇa bharata dr̥bhīka guṅgu krivi jayajaya jānaki maithili sīte sarvastute | pa | bhr̥gu druhyu gāndhāra kīkata cēdi matsya malaṅkhara paktha puru jayajaya jānaki maithili sīte sarvastute | pa | nahuṣa pārāvata śr̥n̄ja ruṣāma parasu yadu turavāsu kuru jayajaya jānaki maithili sīte sarvastute | pa | pāraṇi tr̥tsu sārasavatta ikṣvāku ninnane pūjisute jayajaya jānaki maithili sīte sarvastute | pa | mr̥t gaganājala aggini vāyu dhātu adhātu sarva śive jayajaya jānaki maithili sīte sarvastute | pa | bhūta abhūta jāta ajāta naśvara akṣara ātma śive jayajaya jānaki maithili sīte sarvastute | pa | ādi ananta sadānanda rūpa brahma svarūpa acintya śive jayajaya jānaki maithili sīte sarvastute | pa | daruśana varavanu pādadi arasuva pāmaranu ninnaya pādadi kīrtiya hāḍuva rāmaniva jayajaya jānaki maithili sīte sarvastute | pa |
---------Ramanjaneya
No comments:
Post a Comment