ತಾಯಿಯ ಕಂಡೆನೋ
ಮಹತಾಯಿಯ ಕಂಡೆನೋ
ತಾಯಿಯ ಕಂಡೆನೋ
ಮಹತಾಯಿಯ ಕಂಡೆನೋ
ಮಗುವಿನ ನಗುವಲಿ
ತಾಯಿಯ ಕಂಡೆನೋ
ಮಳೆಬಿಂದುಗಳಾಟದಲಿ
ತಾಯಿಯ ಕಂಡೆನೋ
ಗಿಡಗಳ ನಲಿವಿನಲಿ
ತಾಯಿಯ ಕಂಡೆನೋ
ನೀಲ್ಯಾಕಾಶದಲಿ
ತಾಯಿಯ ಕಂಡೆನೋ
ಗುಡುಗು
ಮಿಂಚುಗಳಲಿ ತಾಯಿಯ ಕಂಡೆನೋ
ಬೆಳದಿಂಗಳ
ತಂಪಿನಲಿ ತಾಯಿಯ ಕಂಡೆನೋ
ಚಿಪ್ಪಿನ ನಲಿಪಲಿ
ಮುತ್ಯಾಲಮ್ಮನ ಕಂಡೆನೋ
ನೇದಿಲೆಯ ನೋವಿನಲಿ ತಾಯಿಯ ಕಂಡೆನೋ
ಭೋರ್ಗರೆವೆ ಕಡಲ ಗರ್ಜನೆಯಲಿ ತಾಯಿಯ ಕಂಡೆನೋ
ಧೂಳ ಕಣ ಗಾತ್ರದಲಿ ಆಲವ ಕಂಡೆನೋ
ಕೇಳೋ ಜಗನ್ಮಾತೆಯ ಕಂಡೆನೋ
ಕರುವಿಗೆ ಹಾಲುಣಿಸುವ ತುರುವಲಿ
ಕರುಣಾಮಯಿಯ ಕಂಡೆನೋ
ಕೃಷ್ಣನ ಕಂಭಕೆ ಬಿಗಿದ ಯಶೋಧೆಯಲಿ
ವಾತ್ಸಲ್ಯದಾಯಿನಿಯ ಕಂಡೆನೋ
ಕಂದನ ಬಾಯಲಿ ಬೆಲ್ಲವ ಹಾಕುವ
ತಾಯಮಮತೆಯಲವಳ ಕಂಡೆನೋ
ಗಗನವ ಸೀಳುವ ಸಿಡಿಲ ಹುಯಿಲಲಿ
ರುದ್ರಭಯಂಕರ ಸ್ವರೂಪವ ಕಂಡೆನೋ
ಸೃಷ್ಟಿಯಲಿ ತಾಯಿಯ ಕಂಡೆನೋ
ದೃಷ್ಟಿಯಲಿ ತಾಯಿಯ ಕಂಡೆನೋ
ಅಂತರಾಳದಲಿ ತಾಯಿಯ ಕಂಡೆನೋ
ಕೇಳೋ ಜಗಜ್ಜನನಿ ಜಗದಂಬೆಯ ಕಂಡೆನೋ
ತಾಯಿ ವಜ್ರಗರಿಕಾಂಬಿಕೆಯ ಕಂಡೆನೋ.
-------ರಾಮಾಂಜನೇಯ
Of the great
Mother, I had a glimpse
A glimpse I had, of Mother, great Mother
In the gurgling laugh of an infant, I glimpsed Her
In the play of rain drops, I glimpsed Her
In the joyful sway of trees, I glimpsed Her
In the clear blue sky, I glimpsed Her
In rumbling thunder and dazzling lightning, I glimpsed Her
In the coolness of moonlight, I glimpsed Her
In the rejoicing of the oyster, I saw the pearl hued One
In the pain of the nightingale, I glimpsed Her
In the crash and roar of the surf, I glimpsed Her
In the dust like seed, I glimpsed a massive banyan
Listen, mother of the worlds I glimpsed
In the cow suckling the calf,
I glimpsed Her, kindness manifest
In Yashodha who bound Krishna to a pillar
I glimpsed Her, overflowing with affection
In the love of a mother, who puts
a piece of jaggery in the child’s mouth
I glimpsed Her affectionate form
In the roaring lightning renting the skies asunder
I saw Her terrible rudra-bhayankara form
In creation I glimpsed Her
With sight I glimpsed Her
In the depths of my heart I glimpsed Her
Listen, I glimpsed Her, progenitor of the worlds,
mother to all the
worlds,
Mother Vajragarikambika I glimpsed.
No comments:
Post a Comment