ಕರುಣಾಳು ತಾಯಿಯೆ
ದಯೆತೋರೆಯಾ
ಕರುಣಾಳು ತಾಯಿಯೆ
ದಯೆತೋರೆಯಾ
ನಿನ್ನೀ ಮಕ್ಕಳ
ಸಲಹಲು ಬಾರೆಯಾ
ಭವಸಾಗರದುಸುಬಿನಲಿ ಸಿಲುಕಿಯೂ
ನಲಿವ ಅಂಧ ಮರುಳರ ಕಾಪಾಡೆಯಾ
ಅಂಧಃಕಾರವ ಸಂಹರಿಸಲು ಕಿಡಿ ಸಾಕು
ಕಿರುಬೆರಳ ನಖದ ಪ್ರಭೆ ದಯಪಾಲಿಸೆಯಾ
ನೋವಮರೆಸಲೊಂದು ಕಿರುನಗೆ ಸಾಕು
ಮುಖಾರವಿಂದ ದರುಶನವ ಕರುಣಿಸೆಯಾ
ಪಾಪವನರಿಯಲು ಪಶ್ಚಾತ್ತಾಪ ಬೇಕು
ಅದನಳಿಸಲು ಮನ್ನಿಪೊಂದು ಸಾಕು
ಅಭಯತೋರಿ ಪ್ರಾರಬ್ಧವನಳಿಸೆಯಾ
ಕರುಣಾಳು ತಾಯಿ ವಜ್ರಗರಿಕಾಂಬಿಕೆಯೆ
ಜೀವಿಗೆ ನಿನ್ನಲಿ ಆಶ್ರಯತೋರೆಯಾ
--------ರಾಮಾಂಜನೇಯ
O Mother, kindness
manifest, won’t you show mercy
O Mother, kindness manifest,
won’t you show
mercy
Come care for your little ones
And rescue the ignorant, rejoicing
In the quicksand that this world is
To drive away darkness
a spark is enough
Won’t you grant the radiance
of your little
toe-nail?
To make one forget pain unbearable
a little smile is
all it takes
Won’t you bestow a glimpse
of your radiant
face?
To realise sin is repentance needed
To wash it away, what more than forgiveness?
Won’t you bless us
and wipe
accumulated sins
Kind mother Vajragarikambika
Won’t you grant me shelter?
--------Ram Sharaph
lovely
ReplyDelete