ನಿನ್ನೆಯ ಪದ್ಯದ ಉತ್ತರಭಾಗವಿದು...
ಏಕಳುವೆಯೋ
ರಾಮಯ್ಯ ಏಕಳುವೆಯೋ
ಏಕಳುವೆಯೋ
ರಾಮಯ್ಯ ಏಕಳುವೆಯೋ |ಪ|
ಮುದ್ದಾದ ಮುಖ ಬೆಳಗಲು ರವಿ ಹೋಗಿರುವನಯ್ಯಾ
ಬಿಸಿಲಿಗೆ ನೆರಳ ಹಾಸಲು ಚಂದಮನು ಹೋಗಿರುವನಯ್ಯಾ
ಕಂಗಳಲಿ ಅವಳಿಯ ನೋಡಲು ತಾರೆಗಳು ಹೋಗಿರುವುವಯ್ಯಾ
ಏಕಳುವೆಯೋ
ರಾಮಯ್ಯ ಏಕಳುವೆಯೋ |ಪ|
ತೊದಲು ನುಡಿಗೆ ತಾಳ ಹಾಕಲು ಹಕ್ಕಿ ಹೋದವಯ್ಯಾ
ತಂಗಾಳಿ ಬೀಸಲೋಸುಗ ಚಿಟ್ಟೆಪಟ್ಟೆಗಳು ಹೋದವಯ್ಯಾ
ಮುಂಗುರುಳ ಸಿಂಗರಿಸಲೋಸುಗ ದುಂಬಿ ಹೋದವಯ್ಯಾ
ಏಕಳುವೆಯೋ
ರಾಮಯ್ಯ ಏಕಳುವೆಯೋ |ಪ|
ಜಳಕ ಮಾಡಿಸಲು ಹೂದಳಗಳ ಇಬ್ಬನಿ ಹೋದವಯ್ಯಾ
ಸಾಂಬ್ರಾಣಿ ಏಕೆಂದು ಕಂಪ ಚೆಲ್ಲಲು ಮೊಗ್ಗು ಹೋದವಯ್ಯಾ
ಗಲ್ಲವ ನೋಡಿ ನಾಚಲು ಹಣ್ಣಾದ ಹೂ ಹೋದವಯ್ಯಾ
ಏಕಳುವೆಯೋ
ರಾಮಯ್ಯ ಏಕಳುವೆಯೋ |ಪ|
ಉಕ್ಕಿ ನಲಿಯಲೆಂದು
ನೊರೆಹಾಲು ಹೋಯಿತಯ್ಯಾ
ಪಾಲ್ಗಡಲಿಂದೆದ್ದವಳ
ದರುಶನ ಮಾಡಲು ಬೆಣ್ಣೆ ಹೋಗದೇನಯ್ಯಾ
ಉದುರುವ ಜೊಲ್ಲ ಸವಿಗೊಳಿಸಲೆಂದು ಬೆಲ್ಲ ಹೋಯಿತಯ್ಯಾ
ಏಕಳುವೆಯೋ
ರಾಮಯ್ಯ ಏಕಳುವೆಯೋ |ಪ|
ಪುಟ್ಟ ಕೈಸೋಂಕ ಪ್ರಸಾದ ಪಡೆಯಲು ಆಟಿಕೆ ಹೋಯಿತಯ್ಯಾ
ಲಾಲಿ ಹಾಡಿ ಮಲಗಿಸಲು ಜೋಗುಳ ಹೋಯಿತಯ್ಯಾ
ಮುದ್ದ ನೋಡಿ ಮತ್ತೇರಿ ತೂಗೇ ತೂಗಿಹೋಯಿತಯ್ಯಾ
ಏಕಳುವೆಯೋ
ರಾಮಯ್ಯ ಏಕಳುವೆಯೋ |ಪ|
ಪುಟ್ಟ ತಾಯ ಬಲಗೈ
ಕಾಣಲು ಶಿವಪ್ಪ ಹೋದನಯ್ಯಾ
ಪುರಂದರ
ಕನಕಾದಿಗಳು ಮಂತ್ರ ಮುಗ್ಧರಾಗಿ ಹೋದರಯ್ಯಾ
ಕಸ್ತೂರಿ
ಚಂದನಗಳು ಪೂಜೆಗೆ ಹೋದವಯ್ಯಾ
ಏಕಳುವೆಯೋ ರಾಮಯ್ಯ ಏಕಳುವೆಯೋ |ಪ|
ಏಕಳುವೆಯೋ
ರಾಮಯ್ಯ ಏಕಳುವೆಯೋ
ಮುದ್ದು ಸೀತಮ್ಮನಿರುವಾಗ
ಬಿಟ್ಟು ಬರುವರೇನಯ್ಯಾ
ಆ ಮುದ್ದ ಕಂಡು
ಮನಸೋಲದಿರುವವರಾರಯ್ಯಾ
ಏಕಳುವೆಯೋ
ರಾಮಯ್ಯ ಏಕಳುವೆಯೋ |ಪ|
--------------ರಾಮಾಂಜನೇಯ
Why do you cry
little Rama, why do you cry
Why do you cry little
Rama, why do you cry |refrain|
To light up the pretty
face has the sun gone my dear
To spread shade in the
heat has the moon gone dear
To gaze at the
beautiful pair of eyes the stars have gone
Why do you cry little
Rama, why do you cry |r|
To sing chorus for the
gurgling have the birds gone
To fan the heat away
have the butterflies gone
To adorn pretty curls
have the bees disappeared
Why do you cry little
Rama, why do you cry |r|
To bathe her have the
dewdrops on petals gone
To replace the
stinging sambrani have the buds gone
To abash at the curve
of the chin have the ripe fruits gone
Why do you cry little
Rama, why do you cry |r|
Overflowing with joy
has the frothing milk gone
To see her who has
arisen form the milky ocean has the butter gone
To sweeten the
dripping drool has the jaggery gone
Why do you cry little
Rama, why do you cry |r|
To feel the touch of
little hands have the toys gone
To finish singing the
refrain has the lullaby gone
Intoxicated by the
cuteness asway has the cradle gone
Why do you cry little
Rama, why do you cry |r|
To see her tiny right
hand has Lord Shiva gone
Tongue tied have the
saints Purandara Kanaka become
For her pooja
has the sandalwood paste gone
Why do you cry little
Rama, why do you cry |r|
Why do you cry little
Rama, why do you cry
With cute Seetamma
around will they leave her ever
Can anyone not lose
their heart to her prettiness
Why do you cry little
Rama, why do you cry |r|
------------Ram Sharaph
No comments:
Post a Comment