ಅಳಬೇಡವೋ ರಾಮಯ್ಯ ಅಳಬೇಡವೋ
ಅಳಬೇಡವೋ ರಾಮಯ್ಯ ಅಳಬೇಡವೋ |ಪ|
ಸಂಜೆಯಾಗದೆ ರವಿ ಹೋದನೆಂದಳಬೇಡವೋ
ಬೆಳಕಾಗದೆ ಚಂದಮ್ಮನು ಕಾಣಲಿಲ್ಲವೆಂದಳಬೇಡವೋ
ಇರುಳಾಗಿಯೂ ತಾರೆ ಮೂಡಲಿಲ್ಲವೆಂದಳಬೇಡವೋ
ಅಳಬೇಡವೋ ರಾಮಯ್ಯ
ಅಳಬೇಡವೋ |ಪ|
ಹಕ್ಕಿಪಕ್ಕಿಗಳ
ಕಲರವವಿಲ್ಲವೆಂದಳಬೇಡವೋ
ಚಿಟ್ಟೆಪಟ್ಟೆಗಳ
ರೆಕ್ಕೆ ಪಟಪಟವಿಲ್ಲವೆಂದಳಬೇಡವೋ
ದುಂಬಿಗಳು ಪರಾಗ
ಚೆಲ್ಲಲಿಲ್ಲವೆಂದಳಬೇಡವೋ
ಅಳಬೇಡವೋ ರಾಮಯ್ಯ
ಅಳಬೇಡವೋ |ಪ|
ಹೂದಳಗಳ ಇಬ್ಬನಿ ಕಾಣಲಿಲ್ಲವೆಂದಳಬೇಡವೋ
ಮೊಗ್ಗುಗಳ ಸುಗಂಧವರಳಲಿಲ್ಲವೆಂದಳಬೇಡವೋ
ಹಣ್ಣಾದ ಹೂಗಳು ಅಮೃತ ಸುರಿಸಲಿಲ್ಲವೆಂದಳಬೇಡವೋ
ಅಳಬೇಡವೋ ರಾಮಯ್ಯ
ಅಳಬೇಡವೋ |ಪ|
ಒಲೆಯ ಮೇಲ
ಹಾಲುಕ್ಕಲಿಲ್ಲವೆಂದಳಬೇಡವೋ
ಕಡೆದ ಮಜ್ಜಿಗೆಯಲಿ
ಬೆಣ್ಣೆಯೇಳಲಿಲ್ಲವೆಂದಳಬೇಡವೋ
ಕಾಯಿಸಿದ ಬೆಲ್ಲ
ಪಾಕವಾಗಲಿಲ್ಲವೆಂದಳಬೇಡವೋ
ಅಳಬೇಡವೋ ರಾಮಯ್ಯ
ಅಳಬೇಡವೋ |ಪ|
ಆಟಿಕೆಗಳು ಕಾಣಲಿಲ್ಲವೆಂದಳಬೇಡವೋ
ಮಲಗಿಸುವ ಜೋಗುಳ ಕೇಳಲಿಲ್ಲವೆಂದಳಬೇಡವೋ
ಉಯ್ಯಾಲೆ ತೂಗುತಿಲ್ಲವೆಂದಳಬೇಡವೋ
ಅಳಬೇಡವೋ ರಾಮಯ್ಯ
ಅಳಬೇಡವೋ |ಪ|
ಶಿವಪ್ಪ
ಇಂದ್ರಾದಿಗಳು ಹೂವೃಷ್ಟಿ ಸುರಿಸಲಿಲ್ಲವೆಂದಳಬೇಡವೋ
ಪುರಂದರ
ಕನಕಾದಿಗಳು ನಾಮಕೀರ್ತನೆ ಹಾಡಲಿಲ್ಲವೆಂದಳಬೇಡವೋ
ಕಸ್ತೂರಿ ಚಂದನಗಳು ಬಿಟ್ಟುಹೋದವೆಂದಳಬೇಡವೋ
ಅಳಬೇಡವೋ ರಾಮಯ್ಯ
ಅಳಬೇಡವೋ |ಪ|
ಅಳಬೇಡವೋ ರಾಮಯ್ಯ
ಅಳಬೇಡವೋ
ಮುದ್ದು
ಸೀತಮ್ಮನನು ನೋಡಲೆಲ್ಲರೂ ಹೋಗಿರುವರೋ
ಆ ನಗುವ ಕಂಡು
ಸೋಲದಿರುವರಾರಿರುವರೋ
ಅಳಬೇಡವೋ ರಾಮಯ್ಯ
ಅಳಬೇಡವೋ |ಪ|
--------------ರಾಮಾಂಜನೇಯ
Don’t Cry Little
Rama, don’t Cry
Don’t cry little Rama,
don’t cry |refrain|
Don’t cry that the sun
left the skies before dusk
Don’t cry that the
moon didn’t appear after dark
Don’t cry that the
stars don’t shine though night
Don’t cry little Rama,
don’t cry |r|
Don’t cry that the
birdsong is not to be heard
Don’t cry that the
butterflies are not flapping their wings
Don’t cry that the bees
have not sprinkled pollen
Don’t cry little Rama,
don’t cry |r|
Don’t cry that the dew
is not on flower petals
Don’t cry that fragrance
does not blossom from buds
Don’t cry that the
ripened fruits don’t pour nectar
Don’t cry little Rama,
don’t cry |r|
Don’t cry that the
milk does not froth over
Don’t cry that butter
does not churn out of curd
Don’t cry that the
melted jaggery does not turn sweet
Don’t cry little Rama,
don’t cry |r|
Don’t cry that the
toys are not to be seen
Don’t cry that the
sweet lullaby is not to be heard
Don’t cry that your
cradle is not rocking
Don’t cry little Rama,
don’t cry |r|
Don’t cry that the gods
don’t shower petals
Don’t cry that the
saints don’t sing your keertanas
Don’t cry that the
sandal wood paste has gone away
Don’t cry little Rama,
don’t cry |r|
Don’t cry little Rama,
don’t cry
They have all gone to
see little Seeta, pretty Seeta
Can anyone resist that
captivating smile
Don’t cry little Rama,
don’t cry |r|
--------Ram Sharaph
No comments:
Post a Comment