ನನ್ನಲ್ಲೆ
ನಾನಿದ್ದೆನೌ ತಾಯೆ
ನನ್ನಲ್ಲೆ
ನಾನಿದ್ದೆನೌ ತಾಯೆ
ನನ್ನೊಳಗಿರುವ ನನ್ನ ನಾ ಮರೆತೆ
ಸಿದ್ಧಿಯನರಸಿ ಅಲೆದೆನೌ ತಾಯೆ
ಆತ್ಮಜ್ಞಾನವನರಿಯದೆ ಹೋದೆ
ದಿನವೆಲ್ಲ ಅಲೆದ ಹಕ್ಕಿಯು ತಾಯೆ
ದಿವದಂತ್ಯದಿ ಗೂಡಿಗೆ ಹಿಂತಿರುಗುವುದಲ್ಲವೆ
ನಿನ್ನ ಪಾದಗಳಿಗೆ ಮರಳಿದೆ ತಾಯೆ
ಮರುಳ ರಾಮನಿಗೆ ಆಶ್ರಯವ ಕರುಣಿಸಿದೆ
ಪಾದಗಳಿಗೆ ನೆತ್ತಿಯನೊಪ್ಪಿಸಿದೆನೌ ತಾಯೆ
ನಖಗಳಲಿ ನನ್ನನೆ ನಾ ಕಂಡೆನು
ಪಾದಗಳನುಗ್ರಹವ ಕರುಣಿಸಿ ತಾಯೆ
ಆತ್ಮದರುಶನವ ತೋರಿಸಿದೆ
ನಿನ್ನ ಕರುಣೆಗೆ ಮಿತಿಯುಂಟೆ ತಾಯೆ
ಪಾದಾಶ್ರಯವಿಲ್ಲದೆ ಬೇರೇನು ಬೇಕಿಲ್ಲ
ಅಲ್ಲಿಯೆ ಆತ್ಮನಿರುವ ತಾಯೆ
ಅಲ್ಲಿಯೇ ಪರಬ್ರಹ್ಮನೂ ಇರುವ.
--------ರಾಮಾಂಜನೇಯ
I was engrossed in
myself mother
I was in myself mother [I was overcome by my ego]
I forgot the “I” in me
[I forgot my true-self i.e., Atman]
I roamed around
seeking realisation
But failed to
understand the knowledge of [in] self
Doesn’t the bird that
flies about all day
Return to the nest at
the end of the day
So did I return to your
feet mother
You granted shelter to
this fool Rama
I offered my head at
your feet mother
And saw myself
reflected in your toe-nails
Bestowing the kindness
of your feet mother
You showed me a
glimpse of my self [Atman]
Is there an end to
your kindness mother
Shelter of your feet
is all that I seek
The Atman resides
there mother
As does the
para-Brahman
---------Ram Sharaph
No comments:
Post a Comment