Sunday, July 12, 2020

ಅಯೋನಿಜ ಸಂಭೂತ ತಾಯಿಯೆ / O Mother of non-mortal birth

ಅಯೋನಿಜ ಸಂಭೂತ ತಾಯಿಯೆ

 

ಅಯೋನಿಜ ಸಂಭೂತೆ ಅನಾದಿ ಅನಂತೆ

ನಿನ್ನ ಸಾಕ್ಷಾತ್ಕಾರವ ಹಾಡಲೆನಗೆ ಸಾಹಸವೆಂತು

 

ಅಗ್ನಿಯ ದಹಿಸಲು ಬಹುದೆ

ಸೂರ್ಯನ ಬೆಳಗಲು ಬಹುದೆ

ಬೆಳದಿಂಗಳಿಗೆ ತಂಪನೀಯಲು ಬಹುದೆ

ನೀರನು ತೋಯಲು ಬಹುದೆ

ಆಕಾಶವ ಎಣಿಸಲು ಬಹುದೆ

ತಾಯಿ ವಜ್ರಗರಿಕಾಂಬಿಕೆಯೆ

ಮಾನವ ಗರ್ಭ ನಿನ್ನ ಹೊರಲು ಬಹುದೆ

 

ಅಯೋನಿಜ ಸಂಭೂತೆ ಅನಾದಿ ಅನಂತೆ

ನೀನಲ್ಲವೆ ಸೃಷ್ಟಿಯ ಸೃಷ್ಟಿಕರ್ತೆ

 

ಅಗ್ನಿಗೆ ಶಾಖವ ನೀಡಿದೆ

ರವಿಗೆ ಬೆಳಕನು ಕರುಣಿಸಿದೆ

ಶಶಿಯಲಿ ತಂಪನು ತುಂಬಿದೆ

ತೇವವ ಕೊಟ್ಟು ಅಮೃತವಾಗಿಸಿದೆ

ಗಗನಕೆ ಶೂನ್ಯವ ದಯಪಾಲಿಸಿದೆ

ಹುಲು ಮಾನವಂಗೆ ಅರಿವನೀಯ್ದು

ದರುಶನವ ಕರುಣಿಸಿದೆ

 

ಕರುಣಾಮಯಿ ತಾಯಿ ವಜ್ರಗರಿಕಾಂಬಿಕೆಯೆ

ನಿನ್ನ ಸಾಕ್ಷಾತ್ಕಾರ ರೂಪವ ಬಣ್ಣಿಸುವ ಸಾಹಸವೆ?

 

--------ರಾಮಾಂಜನೇಯ

  

O Mother of not mortal birth

 

You who are not of mortal birth,

                without beginning or end

Do I dare describe your divine manifestation?

 

Can fire be burnt?

Can the sun be lighted up?

Can the moonbeams be cooled?

Can water be washed?

Can the sky be measured?

Mother Vajragarikambika,

Can a mortal womb bear you?

 

You who are not of mortal birth,

                without beginning or end

Aren’t you the creator of creation?

 

You granted heat to fire

Bestowed light to the sun

Filled coolness into the moon

Made water into life giving nectar

Bestowed infinity to the sky

Gave us mortals understanding

And blessed us with a glimpse

of your divine manifestation

 

Kind mother Vajragarikambika

Do I dare describe your divine manifestation?

 

---------Ram Sharaph

No comments:

Post a Comment