Saturday, June 13, 2020

ಹೋಗಬೇಡವೇ ಸಖಿಯೆ / Don’t go sakhi

ಹೋಗಬೇಡವೇ ಸಖಿಯೆ

 

ಜಡೆಯ ಮೊಗ್ಗಿನ ಮೇಲದು ಇಬ್ಬನಿಯಲ್ಲ ಸಖಿಯೆ

ದೂರ ಹೋಗುವೆಯಾ ಸಖಿಯೆ ನಮ್ಮನು ಬಿಟ್ಟು ಹೋಗುವೆಯಾ

ಬೀಸುವ ಬಿಸಿಗಾಳಿ ಚಾಮರದಿಂದಲ್ಲವೆ ಸಖಿಯೆ

ಹೋಗಬೇಡವೆ ಸಖಿಯೆ ನಮ್ಮಿಂದ ದೂರ ಹೋಗಬೇಡವೆ

ಮಲ್ಲಿಗೆ ಹೂಗಳನಾರಿಸದೆ ಕೈ ಒರಟಾಗುವುದು ಸಖಿಯೆ

ಹೋಗುವೇಕೆಲೆ ಸಖಿಯೆ ನಮ್ಮಲಿ ಮುನಿಸಾಗಿ ಹೋಗುವೆಯೇನೆ

ಹೊಸ ರೇಷಿಮೆಗಳೊರಟು ಗಾಸಿಮಾಡುವುದು ಸಖಿಯೆ

ಹೋಗಬೇಕೇಕೆ ಸಖಿಯೆ ಸಖಿಯರ ಬಿಟ್ಟು ಹೋಗಬೇಕೇನೆ

ಕಾಂಚನ ರತ್ನಗಳ ಹೊರೆ ಮಣಿಕಟ್ಟನು ಮುರಿವುದು ಸಖಿಯೆ

ಹೋಗುವೆಯೇಕೆ ಸಖಿಯೆ ಸಖಿಯರ ಬಿಟ್ಟು ಹೋಗುವೆಯೇಕೆ

ಅರಶಿನವ ಕಾಣದೆ ಮುಖಗಳ ರಂಗೇರುವುದೆ ಸಖಿಯೆ

ಹೋಗಬಾರದು ಸಖಿಯೆ ಗೆಳತಿಯರ ಬಿಟ್ಟು ಹೋಗಬಾರದೆ

ಗೋರಂಟಿಯ ರುಬ್ಬದೆ ಅಂಗೈ ರಂಗಾದೀತೆ ಸಖಿಯೆ

ಹೋಗಬಿಡೆವು ಸಖಿಯೆ ನಿನ್ನ ನಾವ್ ಹೋಗಬಿಡೆವು

ಕೋಕಿಲಗಳ ರೋದನ ಯಾರತಾನೆಬ್ಬಿಸುವುದು ಸಖಿಯೆ

ನೀ ಹೋದೆಯೆಂದರೆ ನಮ್ಮ ಗತಿಯೇನೆ ಸಖಿಯೆ

ನಗು ಮರೆಚಲಾರದ ನಮ್ಮಳುವನು ನೋಡೇ ಸಖಿಯೆ

ನಮ್ಮಾಣೆ ಹೋಗಬೇಡವೆ ಸಖಿಯೆ ದೂರ ಹೋಗಬೇಡವೆ

ಉಸಿರುಸಿರಲಿ ಬೆರೆತ ನಿಡುಸುಯ್ ಕಾಣದೇನೆ ಸಖಿಯೆ

ಬಿಟ್ಟು ಹೋಗುವೆಯೇಕೆ ಸಖಿಯೆ ನಮ್ಮಗಳ ಬಿಟ್ಟು ಹೋಗುವೆಯೇಕೆ

 

---------ರಾಮಾಂಜನೇಯ


ಮಲ್ಲಿಗೆ ಮೊಗ್ಗುಗಳ ಮೇಲಿರುವುದು ಇಬ್ಬನಿಯಲ್ಲ, ಸಖಿಯರ ಕಂಬನಿಗಳು.  ಬೀಸುವ ಬಿಸಿಗಾಳಿ ದುಃಖದ ನಿಡುಸುಯ್ಗಳು.  ಸಖಿಯರು ಸೀತಮ್ಮನ ಜಡೆಗಾಗಿ ಮಾತ್ರವೇ ಮಲ್ಲಿಗೆ ಮೊಗ್ಗುಗಳನಾರಿಸುವರು.  ಅವಳಿಲ್ಲದೆ ಆರಿಸರು, ಆರಿಸದೆ ಕೈಗಳು ಒರಟಾಗುವುವು.  ಸಖಿಯರು ಕೈಗೆ ಬಂದ ಹೊಸ ವಸ್ತ್ರಗಳನ್ನೆಲ್ಲಾ ಸೀತಮ್ಮನಿಗೇ ಉಡಿಸುವರು. ಅವಳಿಲ್ಲದೆ ಆ ಹೊಸ ವಸ್ತ್ರಗಳನ್ನು ಅವರೇ ಉಡಬೇಕು, ಸವೆಯದ ಹೊಸ ರೇಷಿಮೆ ಅವರ ಕೋಮಲ ಚರ್ಮವನ್ನು ಗಾಸಿಗೊಳಿಸುವುದು.  ಆಭರಣಗಳನ್ನೆಲ್ಲಾ ಸಖಿಯರು ಸೀತಮ್ಮನಿಗೇ ತೊಡಿಸುವರು.  ಅವಳಿಲ್ಲದೆ ತಾವೇ ತೊಡಬೇಕಾಗುತ್ತದೆ, ಆ ಆಭರಣಗಳ ಭಾರವನ್ನು ಹೊರುವ ಅಭ್ಯಾಸವಿಲ್ಲದೆ ಮಣಿಕಟ್ಟು ಮುರಿಯುವುದು.  ಸಖಿಯರು ಸೀತಮ್ಮನ ಮುಖಕ್ಕೆ ಅರಶಿನವನ್ನು ಲೇಪಿಸುತ್ತಾರೆ, ಸ್ನೇಹದಿಂದ ಅಪ್ಪುತ್ತಾರೆ, ಆ ಅಪ್ಪುಗೆಯಿಂದ ಅರಶಿನ ಅವರ ಮುಖಗಳಿಗೆ ಅಂಟುತ್ತದೆ.  ಅವಳಿಲ್ಲದೆ ಯಾರಿಗೆ ಅರಶಿನ ಲೇಪ ಹಾಕುವರು?  ಯಾರನ್ನು ಅಪ್ಪುವರು?  ಅವರುಗಳ ಮುಖಕ್ಕೆ ಅರಶಿನ ಹೇಗೆತಾನೆ ಅಂಟೀತು?  ಸಖಿಯರು ಸೀತಮ್ಮನಿಗೋಸುಗ ಗೋರಂಟಿಯ ಅರೆಯುವರು, ಅರೆಯುತ್ತಾ ಗೋರಂಟಿ ಅವರ ಕೈಗಳಿಗಂಟುತ್ತದೆ, ರಂಗೇರಿಸುತ್ತದೆ.  ಅವಳಿಲ್ಲದೆ ಅವರು ಗೋರಂಟಿ ಅರೆಯರು, ಅವರ ಕೈಗಳಿಗೆ ರಂಗು ಹೇಗೆ ಬಂದೀತು?  ಸೀತಮ್ಮನಿಲ್ಲದೆ ಕೋಕಿಲಗಳು ರೋದಿಸುತ್ತವೆ.



Don’t go sakhi

 

It is not dew on the jasmine buds in your hair, sakhi

Will you go afar sakhi, leaving us will you go

The hot air that blows is not from the fan, sakhi

Don’t go sakhi, don’t go so far from us

Not plucking jasmine buds, our hands will become rough, sakhi

Why are you going sakhi, are you angry with us

The rough new silks will bruise our skin, sakhi

Why do you have to go sakhi, leaving your friends do you have to go

The weight of gold and gems will break our wrists, sakhi

Why are you going sakhi, leaving your friends why are you going

Without the touch of turmeric how will our faces glow, sakhi

You shouldn’t go sakhi, leaving your friends your shouldn’t

Without grinding mehendi how will our palms catch colour, sakhi

We won’t let you go sakhi, we won’t let you go

Will the wailing of nightingales wake anyone, sakhi

If you leave us, what will happen to us

Look at us, the weeping that false smiles cannot hide, sakhi

I swear on our life, sakhi, don’t go so far from us

Can’t you see our sighs in every breath, sakhi

Why are you going away sakhi, leaving us behind

 

--------------Ram Sharaph


It is not dew on the jasmine buds in Seetamma’s plait, but the tears of her sakhi’s.  The hot air that blows is their sad sighs.  The sakhis pluck jasmine buds only for decorating Seetamma’s hair.  With her gone, they will no longer pluck jasmine buds.  Without touching the jasmine buds, they claim their hands will become rough.  Any new garment they get their hands on, the sakhis make Seetamma wear it.  With her gone, they will have to wear those themselves.  The new silk weave will be rough and it will bruise their delicate skin, they claim.  The sakhis make Seetamma wear all ornaments.  With her gone, they will have to wear it themselves.  Not used to wearing them, the weight of the gold and gems will break their wrists, they claim.  The sakhis apply turmeric paste on Seetamma’s face to beautify her (further).  Then out of love, they hug her, and in the process, the turmeric paste sticks on their faces, thus increasing their beauty.  With her gone, how will they get turmeric paste on their faces, they claim.  The sakhis grind mehendi for Seetamma.  In the process of grinding, it reddends their hands.  With her gone, they will no longer grind mehendi, so how will their hands get the colour, they claim.  Without Seetamma, even the nightingales will not sing, but only wail, they claim.


No comments:

Post a Comment