With the grace of Mother Seeta, some poems celebrating her glory were composed in the last few days. The creator of these poems is Seetamma, I am only the hand holding thepen. Through the medium of this blog, I will attempt to publish a poem a day. Where necessary, a brief explanation will also be provided. This blog is being published bilingually so that the glory of Seetamma may reach more people. Readers' thoughts and reactions are sought through the comments section. All rights to the poems are reserved. Those intending to use the poems for non-commercial or personal purposes are free to do so - those who desire to sing the poems set to raga are requested to send the mp3 recording to my mail id. Those intending to use these poems for a commercial purpose (concerts etc.,) are required to obtain permission from the author by writing to my mail id. May Seetamma bless us all. Sarvam Seetaakrutamastu Sarvam SeetaarpaNamastu.
Monday, May 25, 2020
ಸೀತಮ್ಮ ಸಂಕೀರ್ತನ: ಪ್ರಸ್ತಾವನೆ / Seetamma Sankeertana: an Introduction
ಸೀತಮ್ಮನ ಕೃಪೆಯಿಂದ ಕಳೆದ ದಿನಗಳಲ್ಲಿ ಕೆಲವು ಸೀತಮನನ್ನು ಕುರಿತ ಪದ್ಯಗಳು ರಚಿತವಾದವು. ಈ ಪದ್ಯಗಳ ಕರ್ತೃ ಸೀತಮ್ಮ - ಲೇಖನಿ ಹಿಡಿದ ಕೈ ಮಾತ ನನ್ನದು. ಈ ಬ್ಲಾಗ್‍ನ ಸಾಧನದಿಂದ ದಿನಕ್ಕೊಂದು ಪದ್ಯವನ್ನು ಪ್ರಕಟಿಸಲು ಯತ್ನಿಸುತ್ತೇನೆ. ಅವಶ್ಯವಿದ್ದೆಡೆ ಸಂಕ್ಷಿಪ್ತವಾದ ವಿವರಣೆ/ವ್ಯಾಖ್ಯೆಯನ್ನೂ ಕೊಟ್ಟಿರುತ್ತದೆ. ಸೀತಮ್ಮನ ಮಹಿಮೆ ಹೆಚ್ಚು ಜನರನ್ನು ತಲುಪಲೆಂದು ಈ ಬ್ಲಾಗ್‍ಅನ್ನು ದ್ವಿಭಾಷೆಗಳಲ್ಲಿ ಪ್ರಕಟಿಸಲಾಗುತ್ತಿದೆ. ಓದುಗರ ಅನಿಸಿಕೆಗಳನ್ನು ಕಮೆಂಟ್‍ನ ಮೂಲಕ ಕೋರಿದೆ. ಪದ್ಯಗಳ ಎಲ್ಲ ಹಕ್ಕುಗಳೂ ಕಾದಿರಿಸಿವೆ. ಓದುಗರು ಲಾಭಾಸಕ್ತಿಯಿಲ್ಲದ ಉದ್ದೇಶಕ್ಕಾಗಿ ಪದ್ಯಗಳನ್ನು ಬಳಸಬಹುದು - ರಾಗಕ್ಕೆ ಅಳವಡಿಸಿ ಹಾಡುವವರು ಅದರ ಧ್ವನಿಮುದ್ರಿಕೆ (recording) ಅನ್ನು mp3 ಮೂಲಕ ಈ ಲೇಖಕರಿಗೆ ಕಳಿಸುವುದಾಗಿ ವಿನಂತಿಸಿದೆ. ಲಾಭಾಸಕ್ತಿಗಾಗಿ ಪದ್ಯಗಳನ್ನು ಉಪಯೋಗಿಸಲುದ್ದೇಶಿಸುವವರು (ಕಛೇರಿ ಇತ್ಯಾದಿ) ಲೇಖಕರನ್ನು ಸಂಪರ್ಕಿಸಬೇಕೆಂದು ನಿರ್ದೇಶಿಸಿದೆ. ಸೀತಮ್ಮನ ಕೃಪೆ ನಮ್ಮೆಲ್ಲರ ಮೇಲಿರಲಿ. ಸರ್ವಂ ಸೀತಾಕೃತಮಸ್ತು ಸರ್ವಂ ಸೀತಾರ್ಪಣಮಸ್ತು.
Subscribe to:
Post Comments (Atom)
No comments:
Post a Comment