ಸೀತಾ ರಕ್ಷಾ ಕವಚ ಸ್ತೋತ್ರ
ಸಹಸ್ರಾವಣ ಸಂಹಾರಿಯೆ ಶಿವಧನು ಕ್ರೀಡಾ ವಿಹಾರಿಯೆ
ಜ್ವಾಲೆಯ ಹಿಮವಾಗಿಸಿ ಹನುಮನ ನಲಿಸಿದ ಅಗ್ನಿಸ್ವಾಮಿನಿಯೆ
ತಾಯಿಯೂ ನೀನೆ ತಂದೆಯೂ ನೀನೆ ದಾರಿತೋರಿದ ಗುರುವೂ ನೀನೆ
ಕುಡಿಕೆಯಲಿ ಮೂಳೆ ಮಾಂಸಗಳ ತುಂಬಿದ ಜೀವದಾನಿ ತಾಯಿಯೆ
ದೇಹದಿ ಪ್ರಾಣ ವಾಯುಗಳ ಉಸುರಿದ ಪ್ರಾಣದಾತ ತಂದೆಯೆ
ಮನದಲಿ ಜ್ಞಾನವ ತುಂಬಿ ಅಜ್ಞಾನವ ತೊಲಗಿಸಿದ ಶ್ರೀಗುರುವೆ
ನಾಮಜಪವ ಕರುಣಿಸಿ ಕವಚವಾದ ತಾಯಿ ವಜ್ರಗರಿಕಾಂಬಿಕೆಯೆ
ಸೀತಾ ನಾಮಸ್ಮರಣೆಯೇ ಅಭಯ ಜಾನಕೀ ನಾಮಜಪವೇ ವಜ್ರಕವಚ
ಜಗಜ್ಜನನಿ ಜಗತ್ಪಾಲಕಿ ಸೃಷ್ಟಿಕರ್ತೆ ಮಹಾಮಾಯೆ ಮಹಾಮಾತೆಯೆ
ದುಷ್ಟಹರೆ ಅಭಯದಾತೆ ಇಷ್ಟಾರ್ಥ ಸಿದ್ಧಿಸುವ ಕರುಣಾಮಯಿಯೆ
ಭವಭಯಹರಣಿ ಸರ್ವದುಃಖ ನಿವಾರಿಣಿ ನಮ್ಮಯ ಪಾಲಿಸು ದಯಾಮಯಿಯೆ
ನಿನ್ನಿಂದ ಮಾತ್ರವಿರುವ ನನ್ನ ನಿನ್ನೀ ರಕ್ಷಾಕವಚವು ರಕ್ಷಿಸಲಿ ತಾಯಿ
ಮೂಢರಾಮನು ಸದಾ ಸೀತಾದೇವಿ ಸೇವಕನು
ಸರ್ವಂ ಸೀತಾಕೃತಮಸ್ತು ಸರ್ವಂ ಸೀತಾರ್ಪಣಮಸ್ತು
-------ರಾಮಾಂಜನೇಯ
Sitadevi raksha
kavacha stotra
Killer of the thousand
headed Ravana,
who sports with
the mighty bow of Shiva,
You gladdened Hanuman,
making flame cool as
ice, O master of fire
You are the mother,
you are the father,
you are the guru who
shows the path,
You are the life
giving mother
who filled the vessel
of the body
with flesh and blood,
You are the breath
bestowing father
who breathed into this
body
life sustaining
breaths,
You are the supreme
guru
who filled me with
true knowledge
and drove away my
ignorance,
You are Mother
Vajragarikambika
who in eternal
kindness granted us
the armour of your
name-chanting
Life giver to the
whole world
protector and nurturer
of this world
the cause of all
creation
and all illusion,
great Mother,
Defeater of evil, sanctuary
of all
wish fulfilling
benevolence,
Remover of all fears
and sorrows
abode of kindness, in
your care are we,
I, who am of you, for
you
may this stotra of
yours protect me
like a protective
armour,
Though ignorant, I am
forever
a servant of you
divine Seetadevi
Everything is of Seeta
Everything is to Seeta
---------Ram Sharaph
No comments:
Post a Comment