Sunday, July 5, 2020

ಪಾದಾಶ್ರಯವನ್ನರಸುವೆನೆಂದು ಮುನಿಯಬೇಡ ತಾಯಿಯೆ / Don’t be annoyed Mother, that I seek the shelter of your feet

ಪಾದಾಶ್ರಯವನ್ನರಸುವೆನೆಂದು ಮುನಿಯಬೇಡ ತಾಯಿಯೆ

 

ಮಾತುಮಾತಿಗೂ ಪಾದಾಶ್ರಯವನ್ನರಸುವೆನೆಂದು ಮುನಿಯಬೇಡ ತಾಯಿ

ನೀನಲ್ಲದೆ ಎನಗೆ ರಕ್ಷೆ ಯಾರು ತಾಯಿ

ತುರುವ ಕಂಡ ಕರುವು ಬಳಿಗೋಡದೆ

ಕರುಣಾಮಯಿ ಕಾಮಧೇನುವು ನೀನು

ನಿನ್ನ ಕರು ನಾನಲ್ಲವೆ ತಾಯೆ ವಜ್ರಗರಿಕಾಂಬಿಕೆಯೆ

ಬಿಸಿಲಲಿ ಬೆಂದವನು ನೆಳಲ ಕಂಡು ಹಿಗ್ಗದಿರುವನೆ

ಭವಸಾಗರ ಬಳಲಿನ ಬಿಸಿಲಿಗೆ ನೆರಳು ನೀನಲ್ಲವೆ

ಅವ್ವೆಯ ಮಡಿಲ ಕಂಡ ಮಗುವು ನೆಲವನ್ನಪ್ಪುವುದೆ

ತಾಯೆ ನಿನ್ನ ಪದತಲದ ಶಾಂತಿಯಿರೆ

ಜೀವನದ ಅಳಲು ತೊಳಲುಗಳಿಂದ ಬಳಲಿದ ರಾಮ

ಆಶ್ರಯದ ಮೊರೆ ಬೇಡದೆ ಬೇರೇನ ಮಾಡೆ

 

--------ರಾಮಾಂಜನೇಯ

 

Don’t be annoyed Mother, that I seek the shelter of your feet

 

Don’t be annoyed Mother

that I seek the shelter of your feet

for every small thing,

Who else but You

should protect me?

Doesn’t a delighted calf

run to the mother cow?

You are the infinitely kind

wish fulfilling nurturer of the world,

Am I not your calf

Mother Vajragarikambika?

Will the sun weary traveller

not rejoice on seeing shade?

Are you not the shade

from the heat of this unreal world?

Will an infant choose the hard earth

over the comfort of the mother’s lap?

Mother, with the peace of your feet

at but arm’s reach,

Will this world weary Rama

buffetted by worries and griefs

Do anything but seek

the shelter of your feet?

 

--------Ram Sharaph

No comments:

Post a Comment