Monday, July 6, 2020

ಏನೆಂದು ವರ್ಣಿಸಲಿ ತಾಯಿ / How shall I describe you, Mother

ಏನೆಂದು ವರ್ಣಿಸಲಿ ತಾಯಿ

 

ಕೇಳುವ ಲೋಕಕೆ ಏನೆಂದು ಹೇಳಲಿ ತಾಯಿ

ನಿನ್ನನು ಚಿತ್ರಿಸಲು ಕೇಳುವರಲ್ಲ

ನಿನ್ನೀ ವರದ ಹಸ್ತವ ಬಣ್ಣಿಸಲು ಪದಗಳು ಸಾಲದು

ಪದತಲ ಮಹಿಮೆಯ ವರ್ಣಿಸಲು ಮಾತು ಬಾರದು

ಕ್ಷುದ್ರ ನಾನು ಕರುಣಾಕಟಾಕ್ಷವ ಚಿತ್ರಿಸುವ ಸಾಹಸವೆ

ಕಾಣುವುದನ್ನೇ ವರ್ಣಿಸಲು ಆಗದು

ಕಾಣದ್ದನ್ನು ಹೇಗೆತಾನೆ ಬಿಡಿಸಲಿ ತಾಯಿ

ನಿನ್ನ ಕೃಪೆಯೊಂದೇ ಸಾಕೆನ್ನುವ ರಾಮನಿಗೆ

ಬೇರೆನುತ ಬೇಕು ತಾಯಿ ವಜ್ರಗರಿಕಾಂಬಿಕೆಯೆ

 

--------ರಾಮಾಂಜನೇಯ

How shall I describe you, Mother

 

What shall I tell those who ask, Mother

They who want me to picture you

Words are not enough to describe

                your hand that blesses

Words fail to describe the glory

                of your lotus feet

Unqualified as I am, can I dare

                picture your eyes that

                overflow with kindness

When I cannot describe

                that which I see

How can I explain that

                which is beyond mortal sight?

I who ask for nothing

                beyond your munificence

What else do I need

                Mother Vajragarikambika?


--------Ram Sharaph

No comments:

Post a Comment