ಯಾವ
ದೇವ ಹಿರಿಯನು?
ಅನ್ನಮಯ್ಯನ ವೆಂಕಟ ಹಿರಿಯನೋ
ಅಣ್ಣನ
ಕೂಡಲಸಂಗಮದೇವ ಗುರುತನೋ
ಅಕ್ಕನ
ಚೆನ್ನ ಮಲ್ಲಿಕಾರ್ಜುನ ದೊಡ್ಡವನೋ
ಕನಕನ ಕೇಶವ
ಪಂಕ್ತಿಯಲಿ ಮುಂದಿರುವನೋ
ರಂಗನಾಥನಾಗಲೀ
ವಿಠ್ಠಲನಾಗಲೀ
ಎಲ್ಲರೂ
ಹರಿಸ್ವರೂಪವಲ್ಲದೆ ಬೇರೆಯೆ
ಮಂಜುನಾಥನಾಗಲೀ
ಮಲೆಯ ಮಹದೇಶನಾಗಲೀ
ಹೆಸರೇನೇ
ಇದ್ದರೂ ಹರಸ್ವರೂಪವೇ ಅಲ್ಲವೆ
ಶಕ್ತಿಸ್ವರೂಪಿಣಿ
ತಾಯಿ ವಜ್ರಗರಿಕಾಂಬಿಕೆಯೆ
ಬೆಲ್ಲವಿರಲಿ
ಸಕ್ಕರೆಯಿರಲಿ ಹೆಜ್ಜೇನೇ ಇರಲಿ
ಸವಿಯುವ
ಜಿಹ್ವೆಗೆ ಸಿಹಿಯೊಂದೇ ಸತ್ಯವಲ್ಲವೆ
ಹರಿಹರಶಕ್ತಿಗಳೆಲ್ಲರೂ
ಪರಬ್ರಹ್ಮಸ್ವರೂಪವೇ ಅಲ್ಲವೆ
ಸಿಹಿ
ಯಾವ ಸ್ವರೂಪದಲ್ಲಿದ್ದರೇನು
ಸಿಹಿಯ
ಸವಿಯೊಂದೇ ಸತ್ಯ ಬೇರೆಲ್ಲವೂ ಮಿಥ್ಯ
-------ರಾಮಾಂಜನೇಯ
Which god is greater?
Is Basavanna’s God of Kudala Sangama
greater?
Is Akka Mahadevi’s Mallikarjuna bigger?
Or is Kanakadasa’s Keshava ahead in the
line?
Whether Ranganatha or Viththala
Are they anything other than swarupa’s
of Hari?
Whether Manjunatha or Maleya Mahadesha
Whatever be the name are they not
swarupa’s of Hara?
Shakti swarupini mother Vajragarikambike
Whether it is jaggery or sugar or pure
honey
For the tongue that tastes, isn’t
sweetness the only truth?
Aren’t Hari, Hara and Shakti all
swaroopa of Parabrahma?
How does it matter in what form the
sweetness is?
The taste of sweetness is the only
truth, everything else is untruth.
----------Ram Sharaph
No comments:
Post a Comment