Thursday, July 2, 2020

ದೀಪವ ಹಚ್ಚಿರೋ ಮೂಢಗಳಿರಾ / Light a lamp, fools

ದೀಪವ ಹಚ್ಚಿರೋ ಮೂಢಗಳಿರಾ

 

ದೀಪವ ಹಚ್ಚುವುದು ಕಂಚನು [ತಾಮ್ರವ] ನೋಡಲೇನೋ ಮೂಢಗಳಿರಾ

ಬಟ್ಟಲನು ತುಂಬುವುದು ನೀರನು ನೋಡಲೇನೋ ಪಾಮರಗಳಿರಾ

ತಾಯ ಪಾದ ತೊಳೆವುದು ಪದಕಮಲವ ಶುಭ್ರಗೊಳಿಸಲೇನೋ ಮೂರ್ಖಗಳಿರಾ

ದೀವಟಿಗೆಯ ಹಚ್ಚುವುದು ಆಲಯದ ಅಂಧಃಕಾರವ ಸೀಳಲಲ್ಲವೆ

ಬಟ್ಟಲ ತುಂಬುವುದು ಗಂಟಲೊಳಗಿನ ದಾಹವ ಆರಿಸಲಲ್ಲವೆ

ಜ್ಞಾನದ ದೀಪವ ಹಚ್ಚಿರೋ ಭಕುತಿಯ ಬಟ್ಟಲ ತುಂಬಿರೋ

ತಾಯ ಪದತಲವ ಅಶ್ರುಗಳಿಂದ ತೊಯ್ದು ಆತ್ಮವ ಶುಭ್ರಗೊಳಿಸಿರೋ

ಇಹಸಾಗರದಿ ರಾಮನ ಜೊತೆ ಮುಳುಗಿರುವ ನನ್ನ ಬಂಧುಗಳಿರಾ

 

---------ರಾಮಾಂಜನೇಯ


Light a lamp, fools

 

Fools light lamps to admire the brass

Fools fill vessels to watch the water

Fools wash Her feet to clean them!

Light a lamp to drive away the darkness

Fill water to quench the thirst

Light the lamp of knowledge,

                fill the vessel of bhakti

Wash Mother’s feet with tears,

                and purify your soul

Listen bretheren, all ye

drowning in the misery of the world.

 

----------Ram Sharaph


No comments:

Post a Comment