ಮೂಗುತಿಯ ಕಂಡು
ಬೆರಗಾದೆ ತಾಯಿ
ಮೂಗುತಿಯ
ಬಿಂದುವೊಂದೊಂದರಲ್ಲೂ
ಬ್ರಹ್ಮಾಂಡವನೇ
ಕಂಡಿರುವೆ
ಪ್ರಭೆಯಲಿ ಕಂಡೆ
ಶತಕೋಟಿ ಸೂರ್ಯಗಳ
ಕಾಲದ ಆದಿ ಅನಂತವ
ನೂರೆಂಟು ಕಾಲಗಳ
ತ್ರಿಮೂರ್ತಿಗಳ
ಕಂಡೆ
ದೇವ ದೈತ್ಯರ
ಕಂಡೆ
ಕಂಡೆ ನಾ ಬೆಳಕ
ಕಣ್ಣ ಕೋರೈಸುವ
ಬೆಳಕ
ಆತ್ಮವ ಬೆಳಗುವ
ಬೆಳಕ
ಆತ್ಮವ ಬೆಳೆಸುವ
ಬೆಳಕ
ಅರಿವನು ಕಂಡೆ
ಅರಿವನು ಅರಿತೆ
ಶೂನ್ಯವ ಕಂಡೆ
ಸರ್ವವನೂ ಕಂಡೆ
ನನ್ನ ನಾ ಕಂಡೆ
ಆದರೂ ತಾಯಿ
ವಜ್ರಗರಿಕಾಂಬಿಕೆಯೆ
ನಿನ್ನನರಿಯದೆ
ಹೋದೆ
ಅಖಿಲ
ಬ್ರಹ್ಮಾಂಡವ್ಯಾಪಿ
ಪರಬ್ರಹ್ಮ
ಸೃಷ್ಟಿವಿಧಾತೆ
ಮಹಾಮಾತೆ
ಜಗಜ್ಜನನಿ
ಮೂಗುತಿಯ
ಗ್ರಹಿಸದೆ ಹೋದೆ
ನಿನ್ನಪಾರ ರೂಪವ
ಅರಿಯುವುದೆಂತು.
--------ರಾಮಾಂಜನೇಯ
I saw your nosering and was amazed Mother
In the tiniest patterns of your nosering
I saw all of creation
In its radiance I saw
A billion suns
Beginning and end of time
Hundreds of aeons
The trinity I saw
Gods and demons I saw
I saw light
Blinding dazzling light
Soul-illumining light
Soul redeeming light
Understanding, I saw
And that (understanding) I understood
I saw shoonya (nothingness)
I also saw everything
I saw myself too
But Mother Vajragarikambika
You, I failed to understand
O Mother, pervading all creation
Creator of parabrahman
determiner of the fate of creation
Mother of all worlds
I cannot even grasp
the immensity of your nose ring
How then can I even
begin to understand your infinite form?
-------Ram Sharaph
No comments:
Post a Comment