Thursday, July 9, 2020

ಹೂಚೆಂಡನು ತಾರೆ ಪುಟ್ಟವ್ವ / Give me the flower ball, little dear

ಹೂಚೆಂಡನು ತಾರೆ ಪುಟ್ಟವ್ವ

 

ಹೂಚೆಂಡನು ತಾರೆ ಪುಟ್ಟವ್ವ ಹೂಚೆಂಡನು ತಾ

ಮಂದಾರ ಪುಷ್ಪಗಳು ನಂದನದ ಪಾರಿಜಾತಗಳು

ಕಲ್ಪವೃಕ್ಷ ಮೊಗ್ಗುಗಳು ಸೌಗಂಧಿಕಾಪುಷ್ಪ ಪರಾಗಗಳು

ರಂಗುರಂಗಿನ ಹೂಗಳ ಹಣೆದು ಮಾಡಿದ ಚೆಂಡು

ಕನಕಾಂಬರ ಸಂಪಿಗೆ ಜಾಜಿ ಮಲ್ಲಿಗೆ ಮೊಗ್ಗುಗಳು

ನಿನ್ನ ಕೈ ಸೋಂಕಿನಿಂದಲೇ ಅರಳಿರುವುವು

ಒಮ್ಮೆ ನಿನ್ನ ಕೈ ಸೋಂಕು ತಾಕಿದರಾಯಿತು

ಈ ಹೂಗಳು ನಮ್ಮ ಕೈಗಳಿಗೆ ಬಾರವು

ಬಂದರೂ ಹೂ ಮೊಗ್ಗುಗಳು ಅರಳವು

ಅರಳಿದರೂ ಕೈ ಮುಟ್ಟಿದಂತೆಯೇ ಬಾಡುವುವು

ಅದಕ್ಕೆ ಪುಟ್ಟವ್ವ ಹೊಚೆಂಡನು ಬಳಿಯಿಟ್ಟುಕೋ ಬೇಡವೇ

ನಮ್ಮ ಕೈಗೆ ತಾರೆ ಪುಟ್ಟವ್ವ ಚೆಂಡನು ನಮ್ಮ ಕೈಗೆ ತಾ

 

---------ರಾಮಾಂಜನೇಯ

 

Give me the flower ball, little dear

 

Come hither, little dear

            give me the flower ball

Flowers from the Mandara mountain

            parijata from Indra’s Nandana

Buds of the wish granting kalpavriskha

            pollen from the saugandhika-pushpa

Flowres of brilliant hues

            are woveni into this ball

Gold stemmed kanakambara, champaka

            jaji and jasmine buds unopened

Have all blossomed, their hearts open

            from your vey touch

Your life giving touch once felt

Into our hands, they won’t come

Even if they do, they won’t bloom

And will shrivel, at our first touch

Have mercy little dear

            don’t hoard the flower ball

Give me the ball dear

            give me the flower ball

 

----------Ram Sharaph

No comments:

Post a Comment