Tuesday, June 30, 2020

ಎಲ್ಲೆಲ್ಲು ಸಡಗರವೆ ಮಿಥಿಲೆಯಲೆಲ್ಲೆಲ್ಲೂ ಸಡಗರವೆ / Joy abounds in Mithila, oh joy abounds!

ಎಲ್ಲೆಲ್ಲು ಸಡಗರವೆ ಮಿಥಿಲೆಯಲೆಲ್ಲೆಲ್ಲೂ ಸಡಗರವೆ

 

ಎಲ್ಲೆಲ್ಲು ಸಡಗರವೆ ಮಿಥಿಲೆಯ ಮನೆಮನೆಯಲ್ಲೂ ಸಡಗರವೆ

ಬೀದಿವೀದಿಗಳಿಗೆ ನೀರ ಹಾಕಿ ಸಿಂಗರಿಸಲು ಸಡಗರವೆ

ತುರುಕರುಗಳಿಗೆ ಮೇಯಹಾಕಿ ಹಾಲ ಕರೆಯಲು ಸಡಗರವೆ

ಅಂಗಳವ ಸಾರಿಸಿ ರಂಗವಲ್ಲಿಯ ಹಾಕಲು ಸಡಗರವೆ

ತಳಿರು ತೋರಣಗಳ ಹೊಸ್ತಿಲಲಿ ತೂಗಿಸಲು ಸಡಗರವೆ

ಮನೆಮಂದಿಗೆ ಅಭ್ಯಂಜನವ ಮಾಡಲು ಸಡಗರವೆ

ಕಜ್ಜಾಯ ಕರೆದು ಸೀತೆಗುಣಿಸಲು ಸಡಗರವೆ

ಹಿತ್ತಲ ಮೊಗ್ಗನವಳ ಜಡೆಯಲಿ ನೇಯಲು ಸಡಗರವೆ

ಕಣಜಕೆ ಅರಶಿನ ಸುರಿಸಲೆಲ್ಲರಿಗೂ ಸಡಗರವೆ

ಹೆಂಗಳಿಗೆ ಧೂಪ ಹಾಕಿ ಜಡೆ ನೇಯಲು ಸಡಗರವೆ

ಹೊಸವುಡುಗೆಯುಟ್ಟು ಕಾಡಿಗೆ ಹಚ್ಚಲು ಸಡಗರವೆ

ಹೂ ಮುಡಿದು ಮಂಟಪಕೆ ಧಾವಿಸಲು ಸಡಗರವೆ

ಸೀತಾರಾಮರ ಕಲ್ಯಾಣ ನೋಡಲೆಲ್ಲರಿಗೂ ಸಡಗರವೆ

ಅಕ್ಷತೆಯ ಸುರಿಸಲೆಲ್ಲರಿಗೂ ಸಡಗರವೆ

ಅರಶಿನ ಕುಂಕುಮ ಹಚ್ಚಿ ಮುತ್ತೈದೆಯ ನೋಡಲೆಲ್ಲರಿಗೂ ಸಡಗರವೆ

ನವವಧುವಿಗೆ ಬಾಗಿನ ಕೊಡಲೆಲ್ಲರಿಗೂ ಸಡಗರವೆ

ಬಾಷ್ಪಗಳ ಸುರಿಸಲೆಲ್ಲರಿಗೂ ಸಡಗರವೆ

ಕಂಬನಿಯ ಹರಿಸಲೂ ಎಲ್ಲರಿಗೆ ಸಡಗರವೆ

ಎಲ್ಲೆಲ್ಲೂ ಸಡಗರವೆ ಇಂದು ಮಿಥಿಲೆಯಲೆಲ್ಲೆಲ್ಲೂ ಸಡಗರವೆ

 

--------ರಾಮಾಂಜನೇಯ

ಒಂದೆರಡು ಮಾತುಗಳು:
ಬಾಷ್ಪಗಳ ಸುರಿಸಲು ಸಡಗರ - ಸೀತಮ್ಮನಿಗೆ ಮದುವೆಯಾಗುತ್ತಿರುವುದು ಎಲ್ಲರಿಗೂ ಸಂತಸದ ವಿಷಯ.  ಆದುದರಿಂದ ಆನಂದಬಾಷ್ಪಗಳನ್ನು ಸುರಿಸುವರು.
ಕಂಬನಿಯ ಹರಿಸಲು ಸಡಗರ - ಸೀತಮ್ಮ ತಮ್ಮನ್ನು ಬಿಟ್ಟು ದೂರ ಗಂಡನ ಮನೆಗೆ ಹೋಗುವಳೆಂದು ವಿಷಾದ.  ಅದರಿಂದ ದುಃಖದ ಕಂಬನಿಗಳನ್ನು ಹರಿಸುವರು.

Joy abounds in Mithila, oh joy abounds!

There’s joy everywhere in Mithila, in every house oh there’s joy!

To wash the streets and adorn them, oh there’s joy!

To feed the calves and milk the cows, oh there’s joy!

To water the porch and draw rangolis, oh there’s joy!

To hang toran’s and buntings at the door, oh there’s joy!

To take oil baths, one and all bustle, oh there’s joy!

To fry sweet kajjaya and feed Seeta, oh there’s joy!

To plait young blossoms in her hair, oh there’s joy!

To mix turmeric in pots of rice, oh there’s joy!

To dry their hair in fragrant smoke, the women are in joy!

To wear new clothes and apply kajal in the eyes, oh there’s joy!

To wear flowers in the hair and rush to the wedding venue, oh there’s joy!

To watch the wedding of Seeta and Rama, oh there’s joy!

To bless with turmeric rice, oh there’s joy!

To apply kumkum and turmeric to the bride, oh there’s joy!

To give ritual gifts to the new bride, oh everyone’s in joy!

Tears of happiness flow, oh there’s joy!

Tears of sadness flow, yet there’s joy!

In the nooks and crannies of Mithila today, oh there’s joy.

 -------Ram Sharaph

A few words of explanation:

Tears of happiness: everyone is happy that Seeta is getting married, hence tears of joy flow.

Tears of sadness: they realise that Seeta will have to go away from them, to her husband's house and this makes them sad.  Hence, tears of sadness flow too.


No comments:

Post a Comment