ತೃಣವನೂ ಉದ್ಧರಿಸಿದ ತಾಯಿ
ಸ್ಪರ್ಶದಿಂದ
ಗರಿಕೆ ವಜ್ರವಾಯಿತು
ಹೆಜ್ಜೆಯಿಂದ
ಅಸುರಪುರಿ ಸಮೃದ್ಧವಾಯಿತು
ದಿನಕಳೆದರಿಂದ
ಪಂಚವಟಿ ತೀರ್ಥವಾಯಿತು
ಚಿತ್ರಕೂಟವು
ಯೋಗಿ ಜನ್ಮಸ್ಥಾನವಾಯಿತು
ಕರುಣೆಯಿಂದ
ಅಗ್ನಿ ಹಿಮವಾಯಿತು
ತೃಣವನೂ
ಉದ್ಧರಿಸಿದ ಕರುಣಾಮಯಿ
ತಾಯಿ ವಜ್ರಗರಿಕಾಂಬಿಕೆಯೆ
ಪಾದಸ್ಪರ್ಶವ
ದಯಪಾಲಿಸಿ
ಮೂಢ ರಾಮನ
ಉದ್ಧರಿಸದಿರುವೆಯಾ?
ಒಂದೆರಡು ಮಾತು: ತಾಯಿಯು ಕೇವಲ ಗರಿಕೆ ಹುಲ್ಲನ್ನು ಹಿಡಿದು ಮೂರು ಲೋಕಗಳನ್ನೂ ಜಯಿಸಿದ, ಇಂದ್ರನನ್ನು ಸದೆಬಡಿದ ರಾವಣನ ಹೆಡೆಮುರಿದಳು. ತಾಯಿಯ ಕೈಯಲ್ಲಿ ಗರಿಕೆ ಹುಲ್ಲೂ ವಜ್ರಾಯುಧವಾಯಿತು. ಇದರಿಂದಲೇ ತಾಯಿಯ ಹೆಸರು ವಜ್ರ-ಗರಿಕಾ-ಅಂಬಿಕೆ ಅರ್ಥಾತ್, ವಜ್ರಗರಿಕಾಂಬಿಕೆ ಆಯಿತು.
Mother, you
redeemed a blade of grass
blade of grass became
vajrayudha,
By mere presence,
the city of Asuras
became prosperous,
You spent but a few
days,
and Panchavati became
a piligrimage
And Chitrakoota,
became a place that
gives birth to yogis
With your kindness,
fire became cool as
ice
Kind mother
Vajragarikambika,
With infinite
kindness,
you transformed a mere
blade of grass,
Won’t you grant me,
the blessings of your
feet
And redeem this
ignorant Rama.
-----Ram Sharaph
A few words: The great Mother broke Ravana's spirit with just a blade of grass, the very same Ravana who had subjugated the three worlds and defeated Indra. In Her hands, even a blade of grass became a vajrayudha. Hence, her name is Vajra-garika-ambika, the Mother who made a blade of grass into the Vajrayudha.
No comments:
Post a Comment